Monday, December 23, 2024

ರೆಸಾರ್ಟ್ ಮೇಲೆ ದಾಳಿ : ಡಬಲ್ ಬ್ಯಾರಲ್ ಗನ್, 310 ಗುಂಡು ವಶ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ವಿಹಂಗಮ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಹಂಗಮ ರೆಸಾರ್ಟ್​ನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ ಡಿವೈಎಸ್​ಪಿ ಗಜಾನನ ವಾಮನ ಸುತಾರ ನೇತೃತ್ವದ 50 ಜನ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡದಿಂದ ಈ ದಾಳಿ ನಡೆದಿದೆ.

ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1 ಲಕ್ಷ ರೂ. ಮೌಲ್ಯದ 1 ಡಬಲ್ ಬ್ಯಾರಲ್ ಬಂದೂಕು, 25 ಸಾವಿರ ರೂ., 310 ಜೀವಂತ ಗುಂಡುಗಳು, 1 ಕತ್ತಿ ಮತ್ತು 1 ಚಾಕನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ 3 ಕಾಡು ಕೋಣದ ಕೊಂಬಿನ ಟ್ರೊಫಿ, 6 ಜಿಂಕೆ ಕೊಂಬಿನ ಟ್ರೊಫಿ, 1 ಸಿಸಿಟಿವಿ ಡಿವಿಆರ್, 51 ಬಿಯರ್ ಟಿನ್​ಗಳು, 1 ಲಕ್ಷ ರೂ., ಮದ್ಯ ತುಂಬಿದ ಬಾಟಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ವಿಹಂಗಮ ರೆಸಾರ್ಟ್ ಮಾಲೀಕರ ವಿರುದ್ಧ ತೀರ್ಥಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES