Sunday, December 22, 2024

ಬಿಜೆಪಿಗರಿಗೆ ಮುಂದೆ ಅಡ್ರೆಸ್ ಇರಲ್ಲ : ಶಿವರಾಜ್ ತಂಗಡಗಿ

ಕೊಪ್ಪಳ : ಬಾಯಿ ತೆಗೆದ್ರೆ ಮೋದಿ.. ಮೋದಿ.. ಅಂತೇಳಿ ಪ್ರಚಾರ ಮಾಡುತ್ತಿದ್ರು. ಕರ್ನಾಟಕ ಜನರು ಬುದ್ದಿವಂತರು, ಅದು ವರ್ಕೌಟ್ ಆಗಿಲ್ಲ. ಮುಂದೆ ಇವರಿಗೆ ಅಡ್ರೆಸ್ ಇರಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕುಟುಕಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ವಸೂಲಿಗಿಳಿದಿದ್ದಾರೆ ಎಂಬ ಮಾಜಿ ಸಚಿವ ಸಿ.ಟಿ. ರವಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಅವರಿಗೆ ನಮ್ಮ ಸರ್ಕಾರದ ಮೇಲೆ ಆರಪ ಮಾಡೋಕೆ ಯಾವುದೇ ವಿಚಾರಗಳಿಲ್ಲ. ಬಿಜೆಪಿ ಅವರಿಗೆ ಹೊಟ್ಟೆಯುರಿ ಶುರುವಾಗಿದೆ. ಗ್ಯಾರೆಂಟಿ ಜಾರಿ ಮಾಡದಿದ್ರೆ ಹೋರಾಟ ಮಾಡತೀವಿ ಅಂದ್ರು. ಯಡಿಯೂರಪ್ಪ ಸಾಹೇಬ್ರು..10 ಕೆಜಿಯಲ್ಲಿ ಒಂದು ಕಾಳು ಕೊಡದಿದ್ದರೆ ಹೋರಾಟ ಮಾಡತಿವಿ ಅಂದ್ರು. ಐದು ಕೆಜಿ ಕೊಟ್ವಿ, ಐದು ಕೆಜಿ ಪ್ಲಸ್ ಹಣ ಕೊಟ್ವಿ. ಈಗ ಮಾತನಾಡೋಕೆ ಏನು ಇಲ್ಲ. ಆರೋಪ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅನುದಾನವೇ ಬಿಡುಗಡೆ ಮಾಡಿಲ್ಲ

ಕಾಂಗ್ರೆಸ್ ಶಾಸಕರಿಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಬಹುಶಃ ಬಿಜೆಪಿ ಕಾಲದಲ್ಲಿ ವಸೂಲಿ ಮಾಡಿರುವ ಬಗ್ಗೆ ನೆನಪಾಗಿರಬೇಕು. ವಸೂಲಿಗಿಳಿಯುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಬಂದಿಲ್ಲ. ಬಿಜೆಪಿಯವರು ವಸೂಲಿ ಮಾಡಿರುವ ಬಗ್ಗೆ ಸಾಕಷ್ಟು ಉದಾಹರಣೆ ಕೊಡಬಲ್ಲೆವು. ಸಿ.ಟಿ.ರವಿ ಈ ರೀತಿ ಮಾತಾಡಿದ್ದಕ್ಕೇ ಜನ ಈಗಾಗಲೇ ಶಿಕ್ಷೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಇನ್ನೂ ಯಾವುದಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನು 15% ಕಮಿಷನ್ ಮಾತು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.

40% ಕಮಿಷನ್ ಬಗ್ಗೆ ತನಿಖೆಗೆ ಬಿಜೆಪಿಯವರೇ ಸದನದಲ್ಲಿ ಹೇಳಿದ್ದರು. ನಾವು ತನಿಖೆ ಮಾಡಲು ಈಗಾಗಲೇ ತಂಡ ರಚಿಸಿದ್ದೇವೆ. ಗುತ್ತಿಗೆದಾರರು ಕಾಮಗಾರಿ ಮಾಡಿದ ಹಣ ಬಿಡುಗಡೆ ಮಾಡೇ ಮಾಡುತ್ತೇವೆ ಎಂದು ಸಚಿವ ತಂಗಡಗಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES