Sunday, December 22, 2024

ಸೂಳೆಕೆರೆ ಸ್ಥಿತಿಗತಿ ಬಗ್ಗೆ DHO ಪರಿಶೀಲನೆ

ದಾವಣಗೆರೆ : ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಸೂಳೆಕೆರೆ ಕಲುಷಿತ ನೀರು ಪೂರೈಕೆ ಬಂದ್ ಹಿನ್ನೆಲೆ ಡಿಹೆಚ್​ಓ ಡಾ. ನಾಗರಾಜ್ ಸೂಳೆಕೆರೆಗೆ ಭೇಟಿ ನೀಡಿ ಕೆರೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪವರ್ ಟಿವಿಗೆ ಡಿಹೆಚ್​ಓ ಡಾ. ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಐದು ಜ್ಯಾಕ್​​ವೆಲ್​​ನಲ್ಲಿ ನೀರು ಪೂರೈಕೆ ಆಗುತ್ತದೆ. ನೀರು ಸ್ಯಾಂಪಲ್ ಕಳುಹಿಸಲಾಗಿತ್ತು. ನೀರಿನಲ್ಲಿ ಬ್ಯಾಕ್ಟಿರಿಯಾ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗದ ಮೈಕ್ರೋ ಬಯಾಲಜಿ ಸೆಂಟರ್​​​​ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸಲಾಗಿದೆ. ನೀರು ಪೂರೈಕೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ಟ್ಯಾಂಕರ್​​ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ತೊಂದರೆ ಆಗಿಲ್ಲ. ಕುಡಿಯಲು ಯೋಗ್ಯವಾದ ಬಳಿಕ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES