Monday, December 23, 2024

ದುಡ್ಡು ಇದ್ದರೆ ಮಾತ್ರ ಕೆಲಸ ಮಾಡಬೇಕು : ದಿನೇಶ್ ಗುಂಡೂರಾವ್

ಬೆಂಗಳೂರು : ದುಡ್ಡು ಇದ್ದರೆ ಮಾತ್ರ ಕೆಲಸ ಮಾಡಬೇಕು. ದುಡ್ಡು ಇಲ್ಲದಿದ್ದರೂ ಯಾಕೆ ಕೆಲಸ ಮಾಡುವುದಕ್ಕೆ ಮುಂದಾಗ್ತಾರೆ? ಎಂದು ಗುತ್ತಿಗೆದಾರರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎರಡು ವರ್ಷದ ತನಕ ಬಿಲ್ ಆಗಲ್ಲ ಅನ್ನೋದು ಗುತ್ತಿಗೆದಾರರಿಗೆ ಗೊತ್ತು ಎಂದು ಜಾರಿಕೊಳ್ಳುವ ಹೇಳಿಕೆ ನೀಡಿದ್ದಾರೆ.

ಯಾವ ಕಾಂಟ್ರಾಕ್ಟರ್ ಯಾರು ಏನು ಕೆಲಸ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಬಿಬಿಎಂಪಿಯಲ್ಲಿ ಇರಬೇಕು. ಅದಕ್ಕೋಸ್ಕರವೇ ತನಿಖಾ ಸಮಿತಿ ಆಗಿದೆ. ಗುತ್ತಿಗೆದಾರರು ಇಷ್ಡು ದಿನವೇ ಕಾದಿದ್ದಾರೆ, ಇನ್ನು ಹದಿನೈದು ದಿನ ಕಾಯಲಿ. ನಮ್ಮ ಕ್ಷೇತ್ರದಲ್ಲೇ ನಕಲಿ ಆಗಿರಲಿ, ಅದೂ ಕೂಡ ತನಿಖೆ ಆಗಲಿ ಎಂದು ಹೇಳಿದ್ದಾರೆ.

ಗುತ್ತಿಗೆದಾರರು Vs ರಾಜಕಾರಣಿಗಳ ವಿಷಯ ಅಲ್ಲ

ಅಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆಯಲ್ಲಿ ಏನು ಬರುತ್ತದೆ ನೋಡೋಣ. ಹಿಂದೆಯೂ ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆ. ಗುತ್ತಿಗೆದಾರರು Vs ರಾಜಕಾರಣಿಗಳ ವಿಷಯ ಅಲ್ಲ ಇದು. ಹಾಗೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಅಷ್ಟೇ. ಇದು ಬೆಂಗಳೂರನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES