Wednesday, January 22, 2025

ತಮಿಳುನಾಡು CM ಸ್ಟಾಲಿನ್ ದೇಶಕ್ಕೆ ದ್ರೋಹ ಬಗೆದಿದ್ದಾರೆ : ಧರ್ಮೇಂದ್ರ ಪ್ರಧಾನ್

ಬೆಂಗಳೂರು : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಕ್ಷುಲ್ಲಕ ರಾಜಕಾರಣದ ಮೂಲಕ ಭಾರತದ ಆತ್ಮವನ್ನು ದುರ್ಬಲಗೊಳಿಸುವಂಥ ಹೇಳಿಕೆ ನೀಡಿದ್ದಾರೆ. ದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಮಸೂದೆ ಮಂಡನೆ ವಿಚಾರವಾಗಿ ಟ್ವೀಟ್ ಮಾಡಿದ್ದ ಎಂ.ಕೆ. ಸ್ಟಾಲಿನ್,​​ ಹಿಂದಿ ಹೇರಿಕೆ ವಿಚಾರ ಪ್ರಸ್ತಾಪಿಸಿದ್ದಲ್ಲದೆ, ಕೇಂದ್ರದ ನಡೆಯನ್ನು ವಿರೋಧಿಸುವುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಧರ್ಮೇಂದ್ರ ಪ್ರಧಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂತಹ ಕ್ಷುಲ್ಲಕ ರಾಜಕೀಯವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಸರಿ ಹೊಂದಬಹುದು. ಆದರೆ, ಇದು ಭಾರತದ ಆತ್ಮವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.

‘ಕಾಶಿ ತಮಿಳು ಸಂಗಮಂ’ ಯೋಜನೆ ಅದಕ್ಕೆ ಒಂದು ಉತ್ತಮ ಉದಾಹರಣೆ. ಭಾರತದ ಸಾಂಸ್ಕೃತಿಕ ನಿರಂತರತೆ ಮತ್ತು ಸಾಹಿತ್ಯಿಕ ಹೆಮ್ಮೆಯು ಕೆಲವೇ ರಾಜವಂಶಗಳಿಗೆ ಸಂಬಧಪಟ್ಟದ್ದು ಎಂಬ ತಪ್ಪಾದ ಆಲೋಚನೆಯನ್ನು ಬಿತ್ತುವವರ ಬಗ್ಗೆ ನೋವಾಗುತ್ತಿದೆ ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES