Wednesday, April 2, 2025

ಸೌಜನ್ಯ ಪರ ಹೋರಾಡುತ್ತಿರುವ ಮಹೇಶ್ ಶೆಟ್ಟಿಗೆ ಗನ್ ಮ್ಯಾನ್ ನೀಡಬೇಕು : ಮುತಾಲಿಕ್

ಮಂಗಳೂರು : ಸೌಜನ್ಯ ಪರ ಹೋರಾಟಕ್ಕೆ ಶ್ರೀರಾಮಸೇನೆ ಕೈಜೋಡಿಸಿದೆ. ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಮನೆಗೆ ಪ್ರಮೋದ್ ಮುತಾಲಿಕ್ ಭೇಟಿ ಕೊಟ್ಟಿದ್ದಾರೆ.

ಬಳಿಕ ಉಜಿರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸೌಜನ್ಯ ಪರ ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಗನ್ ಮ್ಯಾನ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಸೌಜನ್ಯ ಕುಟುಂಬಸ್ಥರಿಗೂ ಸುರಕ್ಷತೆ ನೀಡಬೇಕು. ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಅವರಿಗೆ ಸುರಕ್ಷತೆ ನೀಡಬೇಕು. ರಾಜಕೀಯ ವ್ಯವಸ್ಥೆ, ರಾಜಕಾರಣಿಗಳು ಸಂಪೂರ್ಣ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪೊಲೀಸ್ ಇಲಾಖೆಯೇ ಪ್ರಮುಖ ಆರೋಪಿ

ನ್ಯಾಯ, ಪ್ರಾಮಾಣಿಕತೆ, ಮಾನವೀಯತೆಗಾಗಿ ಹೋರಾಟ ಅನ್ನುವುದು ರಾಜಕಾರಣಿಗಳಲ್ಲಿ ಇಲ್ಲ. ಸೌಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯೇ ಪೊಲೀಸ್ ಇಲಾಖೆ. ಪ್ರಕರಣದಲ್ಲಿ ಮುಗ್ಧ, ಅಮಾಯಕ ವ್ಯಕ್ತಿಯೊಬ್ಬನ ಸಿಲುಕಿಸಿ ಪೊಲೀಸರು ಬಲಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES