Friday, May 17, 2024

ಈ ನಾಲ್ಕು ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರವಾಗಿದ್ದ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದಾರೆ.

ಇದರಲ್ಲಿ ಪ್ರಮುಖ ಮಸೂದೆಗಳಾಗಿದ್ದ ದೆಹಲಿ ಸೇವಾ ಮಸೂದೆ ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ​​ಗೆ ರಾಷ್ಟ್ರಪತಿಗಳು ತಡರಾತ್ರಿ ಸಹಿ ಹಾಕಿದ್ದಾರೆ.

ಇದರ ಜತೆಗೆ ಜನನ ಮತ್ತು ಮರಣಗಳ ನೋಂದಣಿ  ಮಸೂದೆ, ಜನ್ ವಿಶ್ವಾಸ್ ಮಸೂದೆಗೂ ಕೂಡ ಸಹಿ ಹಾಕಿದ್ದು, ಇದು ಮುಂದೆ ಕಾನೂನನಾಗಿ ಜಾರಿಗೆ ಬರಲಿದೆ. ದೆಹಲಿ ಸೇವಾ ಮಸೂದೆಯನ್ನು ಪ್ರತಿಪಕ್ಷಗಳು ವಿರೋಧಿಸಿದೆ. ಈ ಮಸೂದೆಗೆ ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರ ಬಲವಾಗಿ ವಿರೋಧ ವ್ಯಕ್ತಪಡಿಸಿದೆ.

ದೆಹಲಿ ಸೇವಾ ಮಸೂದೆಗೆ ವಿರೋಧ

ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಮಸೂದೆಯನ್ನು ತಂದಿದೆ. ನಮ್ಮ ಸರ್ಕಾರದ ಮೇಲೆ ಹಿಡಿತವನ್ನು ಸಾಧಿಸಿಲು ಪ್ರಯತ್ನ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದೆ. ದೆಹಲಿ ಸೇವಾ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕರವಾಗಿ, ರಾಜ್ಯಸಭೆಯಲ್ಲಿ ಸೋಮವಾರ ಅನುಮೋದನೆ ಸಿಕ್ಕಿದೆ. ಇದೀಗ ಈ ಮಸೂದೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

RELATED ARTICLES

Related Articles

TRENDING ARTICLES