Friday, November 22, 2024

ಸದನದಿಂದ ವಿಪಕ್ಷಗಳು ಓಡಿ ಹೋಗಿವೆ : ಪ್ರಧಾನಿ ಮೋದಿ

ನವದೆಹಲಿ : ಅವಿಶ್ವಾಸ ಗೊತ್ತುವಳಿ ಮಂಡನೆಗೆ ಉತ್ತರ ನೀಡುವಾಗ ವಾಕ್‌ಔಟ್ ಮಾಡಿದ್ದಕ್ಕಾಗಿ ‘ವಿರೋಧ ಪಕ್ಷದ ನಾಯಕರು ಸದನದಿಂದ ಓಡಿಹೋದರು’ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷತ್ ಅನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಿದ್ದಾರೆ.

ಎರಡು ದಿನಗಳ ಹಿಂದೆ ನಾವು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದೇವೆ. ಅವರು ಹರಡುತ್ತಿದ್ದ ನಕಾರಾತ್ಮಕತೆಯನ್ನು ನಾವು ಸೋಲಿಸಿದ್ದೇವೆ. ಸತ್ಯ ಏನೆಂದರೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ಮೇಲೆ ಮತ ಹಾಕಲು ಹೆದರುತ್ತಿವೆ ಎಂದು ಕುಟುಕಿದ್ದಾರೆ.

ಮಣಿಪುರ ವಿಷಯದಲ್ಲಿ ರಾಜಕೀಯ

ಘಮಾಂಡಿಯಾ ಮೈತ್ರಿಯಲ್ಲಿನ ಬಿರುಕುಗಳನ್ನು ಬಹಿರಂಗಪಡಿಸಬಹುದೆಂಬ ಕಾರಣದಿಂದ ಅವರು ಮತ ಚಲಾಯಿಸಲು ಬಯಸಲಿಲ್ಲ. ಅವರು ಸದನದಿಂದ ಓಡಿಹೋದರು. ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅವಿಶ್ವಾಸ ನಿರ್ಣಯವನ್ನು ಸೋಲಿಸಲಾಯಿತು. ವಿರೋಧ ಪಕ್ಷಗಳು ಕೇವಲ ಮಣಿಪುರದಲ್ಲಿ ರಾಜಕೀಯ ಮಾಡಲು ಬಯಸುತ್ತಿವೆ ಎಂದು ಮೋದಿ ಚಾಟಿ ಬೀಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರವು ಕಟ್ಟುನಿಟ್ಟಾದ ಕ್ರಮ ಕೈಗೊಂಡಿದೆ. ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ ಎಂದು ಹೆಳಿದ್ದಾರೆ.

RELATED ARTICLES

Related Articles

TRENDING ARTICLES