Thursday, January 23, 2025

ಅಭಿಮಾನಿಗಳ ಬಳಿ ಹೆಲ್ಪ್ ಕೇಳಿದ ಧೋನಿ : ಯಾಕೆ ಗೊತ್ತಾ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಲೋಕದ ಅತ್ಯುನ್ನತ ನಾಯಕರಲ್ಲಿ ಒಬ್ಬರು. ಭಾರತಕ್ಕೆ ವಿಶ್ವ ಕಿರೀಟ ತೊಡಿಸಿದ ವಿಶ್ವದ ಶ್ರೇಷ್ಠ ನಾಯಕ.

2019ರ ವರ್ಲ್ಡ್​​ಕಪ್ ನಂತರ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ, ಐಪಿಎಲ್​ನಲ್ಲಿ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಪರವಾಗಿ ಆಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ಕಟ್ಟು ಬೀಳದೇ ತನ್ನದೇ ಪ್ರಪಂಚದಲ್ಲಿ ಧೋನಿ ವಾಸಿಸುತ್ತಿದ್ದರೂ ಸದಾ ಸುದ್ದಿಯಲ್ಲಿರುತ್ತಾರೆ.

ವಿಮಾನದ ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣ ಮಾಡುವುದರಿಂದ ಹಿಡಿದು ರಾಂಚಿಯ ಬೀದಿಗಳಲ್ಲಿ ವಿಂಟೇಜ್ ರೋಲ್ಸ್ ರಾಯ್ಸ್ ಓಡಿಸುವವರೆಗೂ ಧೋನಿ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಧೋನಿ ಸಹಾಯ ಕೇಳಿ ಸುದ್ದಿಯಲ್ಲಿದ್ದಾರೆ.

ರಾಂಚಿಗೆ ಹೋಗಲು ದಾರಿ ಯಾವ್ದು?

ಧೋನಿ ತಮ್ಮ ಸ್ನೇಹಿತನ ಜೊತೆ ಕಾರಿನಲ್ಲಿ ಮುಂದೆ ಕೂತು ರಾಂಚಿಗೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಅವರು ಹೋಗುವ ಜಾಗಕ್ಕೆ ದಾರಿ ಗೊತ್ತಿಲ್ಲದೇ ತಮ್ಮ ಅಭಿಮಾನಿಗಳ ಸಹಾಯ ಪಡೆದಿದ್ದಾರೆ. ಧೋನಿ ತಮ್ಮ ಅಭಿಮಾನಿಗಳೊಂದಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡಿದ್ದು, ರಾಂಚಿಗೆ ಹೋಗಲು ದಾರಿ ಕೇಳಿದ್ದಾರೆ. ಧೋನಿ ನೋಡಿ ಖುಷಿಪಟ್ಟ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ದಾರಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES