Wednesday, January 22, 2025

ಅಶ್ಲೀಲ ಫೋಟೊ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ

ಹುಬ್ಬಳ್ಳಿ : ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಇನ್​​​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್​ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಠಾಣೆಯ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅದೇ ಕಾಲೇಜಿನಲ್ಲಿ ಓದುತ್ತಿರುವ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ ನವೀನ ಅಕ್ಕಿ ಹಾಗೂ ಹ್ಯಾಕರ್ ಕಿರಣ ಚೌಹಾಣ್​​​ಗೌಡ ಬಂಧಿತ ಆರೋಪಿಗಳಾಗಿದ್ದಾರೆ.

ಇತ್ತೀಚೆಗೆ ಪೊಲೀಸರು ಇದೇ ಕಾಲೇಜಿನ ಹಳೇ ವಿದ್ಯಾರ್ಥಿ, ಆರೋಪಿ ರಜನಿಕಾಂತ್​ನನ್ನು ಬಂಧಿಸಿದ್ದರು. ಈ ಮೂವರಲ್ಲಿ ಮಾಸ್ಟರ್ ಮೈಂಡ್ ಕಿರಣ ಚೌಹಾಣ್​​ಗೌಡರ್ ಎಂಬುದು ತಿಳಿದುಬಂದಿದೆ. ಹ್ಯಾಕರ್ ಕಿರಣ ಚೌಹಾಣ್​​ಗೌಡರ್ ವಿದ್ಯಾರ್ಥಿನಿಯ ಇನ್​ಸ್ಟಾಗ್ರಾಮ್​ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದ. ಕಿರಣ ಮಾಡುತ್ತಿದ್ದ ಹ್ಯಾಕ್​ಗೆ ನವೀನ್ ಹಾಗೂ ರಜನಿಕಾಂತ್ ಸಾಥ್ ನೀಡುತ್ತಿದ್ದರು ಎನ್ನಲಾಗಿದೆ.

ತನಿಖೆ ತೀವ್ರಗೊಳಿಸಿದ CID ಪೊಲೀಸರು

ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿತ ಮೂವರು ವಿದ್ಯಾರ್ಥಿನಿಯರ ಮನೆಗೆ ತೆರಳಿ ಮಹಜರು ಮಾಡಲಾಗಿದೆ. ಈ ಕೃತ್ಯದ ಬಗ್ಗೆ ಏನಾದರೂ ದಾಖಲೆ ಇದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಮಹಜರು ನಡೆಸಿದ್ದಾರೆ.

RELATED ARTICLES

Related Articles

TRENDING ARTICLES