ಹುಬ್ಬಳ್ಳಿ : ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಶೀತ ಜ್ವರದಂತಹ ಹಲವು ಕಾಯಿಲೆಗಳು ಕಂಡುಬರುತ್ತಿವೆ. ಇದರ ಜೊತೆಗೆ ಮದ್ರಾಸ್ ಐ ಬೇನೆ ಕಾಯಿಲೆ ಶುರುವಾಗಿದ್ದು, ಧಾರವಾಢ ಜಿಲ್ಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಭಾರಿ ಮಳೆ, ಬಿಸಿಲು ಮಿಶ್ರಿತ ವಾತಾವರಣದ ಪ್ರಭಾವದಿಂದ ಶೀತ, ನೆಗಡಿ ಕೆಮ್ಮಿನಂತಹ ಕಾಯಿಲೆಗಳು ಶುರುವಾಗಿವೆ. ಇದರೊಂದಿಗೆ ವಾಂತಿ, ಭೇದಿಯೂ ಕಾಣಿಸಿಕೊಂಡಿದ್ದು, ಕಿಮ್ಸ್ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿರುವ ರೋಗಿಗಳ ಸಂಖ್ಯೆ.
ಇದನ್ನು ಓದಿ : ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಖ್ಯಾತೆ! 30 ಸಾವಿರ ಕ್ಯೂಸೆಕ್ಸ್ ನೀರಿಗೆ ಒತ್ತಾಯ
ಇದರೊಂದಿಗೆ ಜುಲೈ ತಿಂಗಳ ಕೊನೆಯಲ್ಲಿ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಸುರಿದ ನಿರಂತರ ಮಳೆಯಿಂದ ವಾತಾವರಣದಲ್ಲಿ ವಿಪರೀತ ಬದಲಾವಣೆಯಾಗಿದೆ. ಶೀತ, ನೆಗಡಿಯಂತಹ ಕಾಯಿಲೆ ಜೊತೆಗೆ ಜಿಲ್ಲೆಯ ಮಕ್ಕಳಲ್ಲಿ ಕಾಣಿಸಿಕೊಂಡ ಮದ್ರಾಸ್ ಐ ಬೇನೆ ಕಾಯಿಲೆ. ಈ ರೋಗ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಾಯಿಲೆಗೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲಾ ಆಸ್ಪತ್ರೆ ಸೇರಿದಂತೆ ಕಿಮ್ಸ್ ಆಸ್ಪತ್ರೆಯಲ್ಲಿನ ಮಕ್ಕಳ ವಿಭಾಗಗಳಲ್ಲಿ ಪುಲ್ ರಶ್.
ಈ ಮದ್ರಾಸ್ ಐ ಬೇನೆ ಕಾಯಿಲೆಯಿಂದಾಗಿ ಎಲ್ಲಾ ಮಕ್ಕಳು ಕಾಯಿಲೆಗೆ ಒಳಗಾಗುತ್ತಿದ್ದು, ಈ ಸಮಸ್ಯೆಯಿಂದಾಗಿ ಆತಂಕಗೊಂಡಿರುವ ಪೋಷಕರು ಮತ್ತು ಶಿಕ್ಷಕ ವೃಂದದವರು.