Monday, December 23, 2024

ಅಗ್ನಿ ಅವಘಡ: ಮೂರು ವಿಭಾಗಗಳ ಪ್ರತ್ಯೇಕ ತನಿಖೆಗೆ ಆದೇಶ- ಡಿ.ಕೆ.ಶಿವಕುಮಾರ್​

ಬೆಂಗಳೂರು : ಬಿಬಿಎಂಪಿ ಗುಣನಿಯಂತ್ರಣ ಲ್ಯಾಬ್ ನಲ್ಲಿ ಅಗ್ನಿ ಅವಘಡ  ಪ್ರಕರಣಕ್ಕೆ ಸಂಬಂಧಿಸಿ  ತೆನಿಖೆಗೆ ಆದೇಶ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ತಿಳಿಸಿದರು.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ, ಪೊಲೀಸ್ ಮತ್ತು ಎಲೆಕ್ಟ್ರಿಕ್ ಎಕ್ಸಪರ್ಟ್ಸ್ ಗಳು ಈ ಮೂವರನ್ನು ಪ್ರತ್ಯೇಕವಾಗಿ ತನಿಖೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಸೂಚನೆ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ನಗರದ ಪ್ರತಿ ಮನೆ ಮೇಲೂ ತಿರಂಗ ಧ್ವಜ ಹಾರಟ : ತುಷಾರ್​ ಗಿರಿನಾಥ್​

ಸದ್ಯ ಕ್ವಾಲಿಟಿ ಕಂಟ್ರೋಲ್ ಇಟ್ಟುಕೊಂಡಿದ್ದ ಜಾಗ ಸರಿ ಇಲ್ಲ.ಅಲ್ಲಿ ಇಡಬಾರದಿತ್ತು ಇದರಿಂದಾಗಿ ಈ ಅವಘಡ ಸಂಭವಿಸಿರಬಹುದು, ಯಾರೇ ಒತ್ತಡ ತಂದರು ಈ ಜಾಗದಲ್ಲಿ  ಇಡಬಾರದಿತ್ತು , ಇದರಲ್ಲಿ ಅಧಿಕಾರಿಗಳ ತಪ್ಪಿದೆ, ಸ್ವಲ್ಪ ದೂರ ಒಪನ್ ಸ್ಪೆಸ್ ನಲ್ಲಿ ಇಡಬೇಕು ಎಂದರು. ಈ ಪ್ರಕರಣದ ಕುರಿತು ಸದ್ಯ ತನಿಖೆ ನಡೆಯುತ್ತಿದೆ, ವರದಿ ಬಂದ ಮೇಲೆ ವಿಸ್ತೃತವಾಗಿ ಮಾತನಾಡುತ್ತೇನೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಲವು ಕಾಮಗಾರಿಗಳ ಫೈಲ್​ಗಳು ಮುಚ್ಚಿ ಹಾಕಿರೋದ್ ಇಲ್ಲಿತ್ತು, ಯಾವುದೇ ಪೈಲ್ ಗಳಿಗೆ ತೊಂದರೆ  ಆಗಿಲ್ಲ ಎಲ್ಲವನ್ನೂ ಪ್ರತ್ಯೆಕ ಜಾಗಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಸಂಪೂರ್ಣ ಮಾಹಿತಿಯನ್ನು ತನಿಖೆಯ ವರದಿ ಬಂದ ನಂತರ ನಿಮಗೆ ಹೇಳುತ್ತೇನೆ ಎಂದರು.‌

RELATED ARTICLES

Related Articles

TRENDING ARTICLES