Monday, December 23, 2024

ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹ ಸಚಿವರ ಪದಕ

ಬೆಂಗಳೂರು : ‘ಕೇಂದ್ರ ಗೃಹ ಸಚಿವರ ಪದಕ’ಕ್ಕೆ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

2023ನೇ ಸಾಲಿನ ಬೆಸ್ಟ್ ಇನ್ವೆಸ್ಟಿಗೇಷನ್ ಅಧಿಕಾರಿಗಳಾಗಿ ಪದಕ ಘೋಷಣೆ ಮಾಡಲಾಗಿದ್ದು, ದೇಶಾದ್ಯಂತ 140 ಪೊಲೀಸ್ ಅಧಿಕಾರಿಗಳ ಪೈಕಿ ರಾಜ್ಯದ ಐವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಡಿವೈಎಸ್ಪಿ ಶಂಕರ್ ಎಸ್.ಮಾಗಿ, ಇನ್ಸ್​ಪೆಕ್ಟರ್ ರಾಮಪ್ಪ ಬಿ ಗುತ್ತೇದಾರ್, ಇನ್ಸ್​ಪೆಕ್ಟರ್ ಸಿ.ಬಿ.ಶಿವಸ್ವಾಮಿ, ಇನ್ಸ್​ಪೆಕ್ಟರ್ ರುದ್ರೇಗೌಡ ಆರ್ ಪಾಟೀಲ್, ಇನ್ಸ್​ಪೆಕ್ಟರ್ ಪಿ. ಸುರೇಶ್ ಅವರು 2023ನೇ ಸಾಲಿನ ಕೇಂದ್ರ ಗೃಹ ಮಂತ್ರಿಗಳ ವಿಶೇಷ ಕಾರ್ಯಾಚರಣೆ ಪದಕಕ್ಕೆ ಆಯ್ಕೆಯಾಗಿದ್ದಾರೆ.

RELATED ARTICLES

Related Articles

TRENDING ARTICLES