Wednesday, January 22, 2025

ಬೋಳಾ ಶಂಕರ್​ ಸಿನಿಮಾ ಬಿಡುಗಡೆಗೆ ತಾಂತ್ರಿಕ ದೋಷ : ಅಭಿಮಾನಿಗಳು ಆಕ್ರೋಶ

ಬೆಂಗಳೂರು : ತೆಲುಗು ಚಿತ್ರರಂಗದ ಮೆಗಸ್ಟಾರ್​ ಚಿರಂಜೀವಿ ಬಹುನಿರೀಕ್ಷಿತ ಸಿನಿಮಾ ಬೋಳಾ ಶಂಕರ್​ ಚಿತ್ರ ಬಿಡುಗಡೆಯಾಗದ ಹಿನ್ನೆಲೆ ಚಿತ್ರಮಂದಿರದ ಎದುರೇ ಅಭಿಮಾನಿಗಳು ಗಲಾಟೆ ನಡೆಸಿರುವ ಘಟನೆ ನಗರದ ಎಂ.ಜಿ ರಸ್ತೆಯಲ್ಲಿರುವ ಶಂಕರ್​ನಾಗ್​ ಚಿತ್ರಮಂದಿರದ ಬಳಿ ನಡೆದಿದೆ.

ಇದನ್ನೂ ಓದಿ: ಅಂಗನವಾಡಿ ಪೌಷ್ಟಿಕ ಆಹಾರದಲ್ಲಿ ಸತ್ತ ಜಿರಳೆಗಳು: ಕ್ರಮಕ್ಕೆ ಒತ್ತಾಯ

ಬೆಳಗ್ಗೆ 6 ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ 8 ಗಂಟೆಯಾದರೂ ಬಿಡುಗಡೆಯಾಗದ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು ಮತ್ತು ಚಿತ್ರಮಂದಿರದ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ನಾವು ಮೆಗಾಸ್ಟಾರ್​ ಚಿರಂಜಿವಿ ನಟನೆಯ ಬೋಳಾ ಶಂಕರ್​ ಸಿನಿಮಾ ನೋಡಲು ಬೆಳಗ್ಗೆಯಿಂದಲೇ ಸಿನಿಮಾ ಮಂದಿರದ ಎದುರು ಕಾಯುತ್ತ ಕುಳಿತರು ಚಿತ್ರಮಂದಿರದ ಸಿಬ್ಬಂದಿ ಸಿನಿಮಾ ಬಿಡುಗಡೆ ಮಾಡದೇ ಕಾಯಿಸುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಪ್ರೇಕ್ಷಕರ ಗಲಾಟೆ ಬಳಿಕ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಲಾಯಿತು.

ಸಿನಿಮಾ ಬಿಡುಗಡೆಗೆ ತಾಂತ್ರಿಕ ದೋಷ:

ಚಿರಂಜೀವಿ ನಟನೆಯ ಬೋಳಾ ಶಂಕರ್​ ಸಿನಿಮಾ ಬಿಡುಗಡೆಗೆ ತಾಂತ್ರಿಕ ದೋಷ ಎದುರಾಗಿದ್ದು ಸಿನಿಮಾದ ಮೊದಲ ಭಾಗ ಬಿಡುಗಡೆ ಬದಲು ಎರಡನೇ ಭಾಗ ಪ್ರದರ್ಶನ ಮಾಡಿದ್ದಾರೆ.

RELATED ARTICLES

Related Articles

TRENDING ARTICLES