Monday, December 23, 2024

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೋರ್ಟ್​ ಅಟೆಂಡರ್ ಸಾವು

ರಾಮನಗರ : ಕೋರ್ಟ್​ ಅಟೆಂಡರ್ ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.

ಅಟೆಂಡರ್ ಮಧು (36) ಮೃತ ವ್ಯಕ್ತಿ. ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕುಳಿತಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಈ ಹಿನ್ನೆಲೆ ಹೃದಯಘಾತದ ಶಂಕೆಯಿದೆ ಎಂದು ವ್ಯಕ್ತಪಡಿಸಲಾಗಿದೆ.

ಇದನ್ನು ಓದಿ : ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ; ಅಪಾರ ಬೆಳೆ ನಾಶ

ಕನಕಪುರ ತಾಲೂಕಿನ ಬೂದನಗುಪ್ಪೆ ಮೂಲದವರಾಗಿದ್ದ ಮಧು. ಕಳೆದ ಮೂರು ವರ್ಷಗಳಿಂದ ರಾಮನಗರ ಕೋರ್ಟ್​ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು.

ಸ್ಥಳಕ್ಕೆ ಐಜೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES