ಬೆಂಗಳೂರು : ಬಿಬಿಎಂಪಿ ಮುಖ್ಯ ಕಛೇರಿ ಆವರಣದ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಿಂದ ಸುಮಾರು 8 ರಿಂದ 10 ನೌಕರರಿಗೆ ಗಂಭಿರ ಗಾಯಗೊಂಡಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಅನಾಹುತ ಅರ್ಧ ಗಂಟೆಯ ಬಳಿಕ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ಸಿಬ್ಬಂದಿಗಳಿಗೆ ಹರಸಾಹಸ ಪಟ್ಟಿದ್ದಾರೆ.
ಇದನ್ನು ಓದಿ : ಜೋಡೆತ್ತು ಕಳ್ಳತನ; ಜಾಣ ಎತ್ತುಗಳು ರೈತನ ಮನೆಗೆ ಸೇರಿದ್ದೆ ರೋಚಕ!
ಬೆಂಜಿನ್ ಕೆಮಿಕಲ್ ಟೆಸ್ಟ್ ಮಾಡುವ ವೇಳೆ ಬ್ಲಾಸ್ಟ್
ಇನ್ನು ಘಟನಾ ಸ್ಥಳಕ್ಕೆ ಬೆಂಗಳೂರು ಹೆಚ್ಚುವರಿ ಕಮೀಷನರ್ ಎಸ್ ಸತೀಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಂಜಿನ್ ಕೆಮಿಕಲ್ ಟೆಸ್ಟ್ ಮಾಡುತ್ತಿದ್ದ ವೇಳೆ ಬ್ಲಾಸ್ಟ್ ಆಗಿದೆ. ಕೆಮಿಕಲ್ ಟೆಸ್ಟ್ ಮಾಡುವ ವೇಳೆ ಬ್ಲಾಸ್ಟ್ ಆಗಿದ್ದು, 4 ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅದೇ ವೇಳೆ ಮಾತನಾಡಿದ ಅವರು, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರು, ಈ ಅವಘಡ ಸಂಜೆ 5 ಗಂಟೆಗೆ ನಡೆದಿದ್ದು, ನಾವೆಲ್ಲ ಕಚೇರಿಯಲ್ಲಿದ್ದ ವೇಳೆ ಕರೆಂಟ್ ಇರಲಿಲ್ಲ. ತಕ್ಷಣ ವಿಚಾರಿಸಿದಾಗ ಅಗ್ನಿ ಅವಘಡ ನಡೆದ ಬಗ್ಗೆ ಮಾಹಿತಿ ತಿಳಿಯಿತು. ಒಟ್ಟು 8 ಮಂದಿಗೆ ಗಾಯವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಘಟನೆಗೆ ನಿಖರ ಕಾರಣ ತನಿಖೆಯಲ್ಲಿ ಗೊತ್ತಾಗುತ್ತದೆ. ಆದರೆ, ಈಗ ನಾವು ಸಿಬ್ಬಂದಿಗಳ ಜೀವ ಉಳಿಸುವುದಕ್ಕೆ ಪ್ರಯತ್ನಿಸಲಾಗಿದೆ ಎಂದಿದ್ದಾರೆ.