Monday, December 23, 2024

ಪ್ರೀತಿಸಿ ಮದುವೆಯಾಗಿದ್ದ ಯುವತಿ ಸಾವು; ಪತಿ ಮೇಲೆ ಕುಟುಂಬಸ್ಥರಿಗೆ ಅನುಮಾನ

ಮೈಸೂರು : ಒರ್ವ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.

ಮೈಸೂರಿನ ದರ್ಶಿನಿ (21) ಎಂಬುವವರು ಮೃತ ದುರ್ದೈವಿಯಾಗಿದ್ದು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದರ್ಶಿನಿ ಕುಟುಂಬಕ್ಕೆ ಪತಿ ಸೂರ್ಯ ಸುದ್ದಿ ತಿಳಿಸಿದ್ದಾರೆ. ಆದರೆ, ತಮ್ಮ ಮಗಳನ್ನು ಅಳಿಯ ಸೂರ್ಯನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇದನ್ನು ಓದಿ : ಪವರ್​ ಟಿವಿ ಇಂಪ್ಯಾಕ್ಟ್​: ಲಂಚಲಕ್ಷ್ಮಿ ತನಿಖೆಗೆ ಆದೇಶ ನೀಡಿದ ಜಿಲ್ಲಾಧಿಕಾರಿ!

ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮ ನಿವಾಸಿಗಳಾದ ಸೂರ್ಯ ಮತ್ತು ದರ್ಶಿನಿ ಅವರಿಬ್ಬರು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದರು.

ದರ್ಶಿನಿಗೆ ನಿತ್ಯ ವರದಕ್ಷಿಣೆ ತರುವಂತೆ ನನ್ನ ಮಗಳನ್ನು ಹಿಂಸಿಸುತ್ತಿದ್ದ. ಅಷ್ಟೇ ಅಲ್ಲದೆ ಬದುಕಿ ಬಾಳಬೇಕಿದ್ದ ನನ್ನ ಮಗಳನ್ನು ಕೊಲೆ ಮಾಡಿ ನಮ್ಮ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಅಳಿಯನ ಮೇಲೆ ಅತ್ತೆ ಆರೋಪ ಮಾಡಿದ್ದಾರೆ.

ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂರ್ಯ ಮತ್ತು ಆತನ ಕುಟುಂಬಸ್ಥರನ್ನು ಬಂಧಿಸಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ಕೆಆರ್​ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES