Monday, December 23, 2024

ಟ್ಯೂಷನ್ ಮುಗಿಸಿ ತೆರಳುತ್ತಿದ್ದ ಮಕ್ಕಳ ಮೇಲೆ ಹರಿದ ವಾಹನ; ಇಬ್ಬರು ಮಕ್ಕಳು ಬಲಿ

ರಾಮನಗರ : ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಹರಿದ ಗೂಡ್ಸ್ ವಾಹನವೊಂದು ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ ಘಟನೆ ನಗರದ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಬುಧವಾರ ರಾತ್ರಿ 7 ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಮಕ್ಕಳು ಎಂದಿನಂತೆ ಟ್ಯೂಷನ್ ಮುಗಿಸಿ ರಸ್ತೆ ಬದಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಯಮರಾಯನ ರೂಪದಲ್ಲಿ ಬಂದ ವಾಹನವೊಂದು ಏಕಾಏಕಿಯಾಗಿ ಬಂದು ಮಕ್ಕಳ ಮೇಲೆ ಹರಿದಿದೆ.

ಇದನ್ನು ಓದಿ : ಕೊಬ್ಬರಿಗೆ ಬೆಂಬಲ ಬೆಲೆ ಏರಿಸುವಂತೆ ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ಬಂದ್​!

ಗೂಡ್ಸ್ ವಾಹನ ಬಂದು ಗುದ್ದಿದ್ದ ರಭಸಕ್ಕೆ ರೋಹಿತ್(5) ಹಾಗೂ ಶಾಲಿನ (8) ಮೃತ ಮಕ್ಕಳು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಸುಚಿತ್, ಗೌತಮಿ, ಮತ್ತು ಲೇಖನಾ ಈ ಮೂವರು ಮಕ್ಕಳು ಗಂಭೀರ ಗಾಯಕ್ಕೆ ಒಳಗಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ.

ಮನ ಕಲುಕುವ ದುರ್ಘಟನೆ ಬೆನ್ನಲ್ಲೆ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ಗೂಡ್ಸ್ ವಾಹನವನ್ನು ಅಡ್ಡಗಟ್ಟಲು ಮುಂದಾದ ವೇಳೆ ಬೇರೆಡೆ ವಾಹನ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ಬಗ್ಗೆ ಎಎಸ್ಪಿ ಮಾಹಿತಿ ಪಡೆದಿದ್ದು, ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

RELATED ARTICLES

Related Articles

TRENDING ARTICLES