ಬೆಂಗಳೂರು : ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಸಂಬಂಧಿಸಿ ನಾಳೆ ರಾಜ್ಯ ಗುತ್ತಿಗೆದಾರರ ಸಂಘದ ವತಿಯಿಂದ ದೀಢೀರ್ ಪತ್ರಿಕಾಗೋಷ್ಟಿಯನ್ನು ಕರೆಯಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ನಾಳೆ 11 ಗಂಟೆಗೆ ಕರೆಯಲಾಗಿರುವ ಪತ್ರಿಕಾಗೋಷ್ಟಿಯೂ ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದ್ದು ಗುತ್ತಿಗೆದಾರರಲ್ಲೇ ಒಡಕು ಮೂಡಿದ್ಯಾ..? ಎನ್ನುವ ಅನುಮಾನ ಕಾಡುತ್ತಿದೆ.
ಇದನ್ನೂ ಓದಿ: SCP,TSP ಕಾಯ್ದೆ ಬಗ್ಗೆ ಮೊದಲು ಬಿಜೆಪಿಯವರು ಅರ್ಥ ಮಾಡಿಕೊಂಡು ಮಾತನಾಡಲಿ:ಪ್ರಿಯಾಂಕ್ ಖರ್ಗೆ
ಇನ್ನು ನಾಳೆ ನಡೆಯಲಿರುವ ಈ ಪತ್ರಿಕಾಗೋಷ್ಟಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರು ಕಮಿಷನ್ ಆರೋಪ ಕುರಿತು ಕೆಂಪಣ್ಣ ಮತ್ತೊಂದು ಟ್ವಿಸ್ಟ್ ಕೊಡ್ತಾರಾ..? ಕಾದುನೋಡಬೇಕಾಗಿದೆ.
ಈ ಹಿಂದೆಯೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ವಿರುದ್ದವೇ ಕೆಂಪಣ್ಣ 40% ಕಮಿಷನ್ ಆರೋಪ ಮಾಡಿದ್ದರು, ಇನ್ನು ನಾಳೆ ನಡೆಯಲಿರುವ ಸುದ್ದುಗೋಷ್ಟಿಯೂ ತೀವ್ರ ಕುತೂಹಲ ಮೂಡಿಸಿದೆ.