Sunday, December 29, 2024

ಮಣಿಪುರ ಜನತೆಗೆ ಪ್ರಧಾನಿ ಮೋದಿ ಗ್ಯಾರಂಟಿ

ನವದೆಹಲಿ : ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕವೂ ಮಾತು ಮುಂದಿವರಿಸಿದ ಮೋದಿ, ಮಣಿಪುರ ಜನತೆಗೆ ಭರವಸೆ ನೀಡಿದರು.

ಮಣಿಪುರದಲ್ಲಿ ಗಲಭೆಯಿಂದ ಅನೇಕ ಕುಟುಂಬಗಳಿಗೆ ನಷ್ಟ ಆಗಿದೆ. ಮಣಿಪುರ ಜನತೆಯಲ್ಲೂ ನಾನು ವಿನಂತಿ ಮಾಡಿಕೊಳ್ತೇನೆ. ಮಣಿಪುರ ಮತ್ತೆ ಅಭಿವೃದ್ಧಿಯತ್ತ ಸಾಗಲಿದೆ. ಇಡೀ ದೇಶ ಮಣಿಪುರದ ಜನರ ಜೊತೆಗಿದೆ. ಮಣಿಪುರ ಜನರಲ್ಲೂ ಮನವಿ, ದೇಶ ನಿಮ್ಮ ಜೊತೆಗೆ ಇದೆ, ಸದನ ನಿಮ್ಮ ಜೊತೆಗಿದೆ ಎಂದ ಮೋದಿ, ಶಾಂತಿ ಕಾಪಾಡುವಂತೆ ಪ್ರಧಾನಿ ಮನವಿ ಮಾಡಿದರು.

ಮಣಿಪುರದಲ್ಲಿ ಹಿಂಸಾಚಾರ ಶುರುವಾದಗಿನಿಂದ ಬಹಳಷ್ಟು ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ. ಮಾತುಕತೆ ನಡೆಯುತ್ತಿದೆ, ಶಾಂತಿ ಮರುಕಳಿಸಲಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

ಭಾರತ ಮಾತೆ ಬಗ್ಗೆ ಹೇಳಿದ್ದು ಬೇಸರ ತಂದಿದೆ

ಮಣಿಪುರ ಘಟನೆ ಬಗ್ಗೆ ಸದನದಲ್ಲಿ ಅಮಿತ್ ಶಾ ಮಾಹಿತಿ ನೀಡಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೇಂದ್ರ, ಮಣಿಪುರ ಸರ್ಕಾರದಿಂದ ಯತ್ನ ನಡೆಯುತ್ತಿದೆ. ಪ್ರತಿ ಭಾರತೀಯರ ಭಾವನೆ ಕೆಣಕುವ ಪ್ರಯತ್ನ ಆಗ್ತಿದೆ. ಭಾರತ ಮಾತೆ ಬಗ್ಗೆ ಸದನದಲ್ಲಿ ಹೇಳಿದ್ದು ಬೇಸರ ಆಗಿದೆ. ನಾವೆಲ್ಲರೂ ಸವಾಲಿನ ಪರಿಸ್ಥಿತಿ ಮೆಟ್ಟಿ ನಿಲ್ಲೋಣ ಎಂದು ಭರವಸೆ ನೀಡಿದರು.

ಭಾರತ‌ಮಾತೆಯನ್ನು ಒಡೆದವರು ಇವರೇ

ಪ್ರಜಾಪ್ರಭುತ್ವ, ಸಂವಿಧಾನ ಹತ್ಯೆ ಬಗ್ಗೆ ಮಾತನಾಡುವ ಜನರು ಇಂದು ಭಾರತ ಮಾತೆಯ ಹತ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅಗಸ್ಟ್ 14 ದೇಶ ವಿಭಜನೆಯ ದಿನ, ಭಾರತ‌ಮಾತೆಯನ್ನು ಮೂರು ಭಾಗಗಳಾಗಿ ಒಡೆದವರು ಇವರೇ. ಇವರು ಯಾವ ಬಾಯಿಯಿಂದ ಮಾತನಾಡುವ ಧೈರ್ಯ ಮಾಡುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಮೋದಿ ಗುಡುಗಿದರು.

RELATED ARTICLES

Related Articles

TRENDING ARTICLES