Wednesday, January 22, 2025

ನಿಮ್ಮ ನೋ ಬಾಲ್​ಗೆ ಬಿಜೆಪಿ ಸೆಂಚುರಿ ಬಾರಿಸುತ್ತಿದೆ : ಪ್ರಧಾನಿ ಮೋದಿ

ನವದೆಹಲಿ : ವಿಪಕ್ಷಗಳ ನೋ ಬಾಲ್‌ಗೆ ಆಡಳಿತ ಪಕ್ಷ ಬೌಂಡರಿ, ಸಿಕ್ಸರ್ ಹೊಡೀತಿದೆ, ಸೆಂಚುರಿ ಬಾರಿಸುತ್ತಿದೆ. ನಿಮ್ಮ ಸ್ಥಿತಿ ಎಲ್ಲಿಗೆ ಬಂದಿದೆ.. ಎಷ್ಟು ದಾರಿದ್ರ್ಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ಗುಡುಗಿದರು.

ಮಣಿಪುರ ಹಿಂಸಾಚಾರ ಸಂಬಂಧ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಭಾಷಣ ಮಾಡಿದರು.

ನಿಮಗೆ ಶ್ರಮ ಹಾಕೋದಕ್ಕೆ ಏನು ದಾರಿದ್ರ್ಯ ಬಂದಿದೆ. ನಿಮಗೆ ಬಡವರ ಹಸಿವು, ಬಡವರ ಬಗ್ಗೆ ಚಿಂತೆ ಇಲ್ಲ. ಚರ್ಚೆಗೆ ಒಂದಿಷ್ಟು ತಯಾರಿ ಮಾಡಿಕೊಂಡು ಬನ್ನಿ. ನಿಮ್ಮ ಪ್ರತಿ  ಮಾತು ದೇಶದ ಜನ ಕೇಳಿಸಿಕೊಳ್ತಿದ್ದಾರೆ. ನಿಮ್ಮ ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿದ್ದೀರಿ. ಇದೆಲ್ಲವನ್ನೂ ದೇಶದ ಜನತೆ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಇಂಥ ಅಧಃಪತನ ನಾನು ಕಂಡಿಲ್ಲ : ಹೆಚ್.ಡಿ ದೇವೇಗೌಡ

ಭಾರತದ ಘನತೆ ಇಡೀ ವಿಶ್ವಕ್ಕೆ ಗೊತ್ತು

ದೇಶದ 140 ಕೋಟಿ ಜನರು ಕನಸುಗಳನ್ನು ಕಾಣುತ್ತಿದ್ದಾರೆ. ಜನತೆಗೆ ವಿಪಕ್ಷಗಳು ದ್ರೋಹ ಮಾಡಿವೆ. ವಿಪಕ್ಷಗಳ ಮೇಲೆ ಜನರಿಗೆ ನಂಬಿಕೆ ಇಲ್ಲ. ಭಾರತದ ಘನತೆ ಇಡೀ ವಿಶ್ವಕ್ಕೆ ಗೊತ್ತಾಗಿದೆ. ನೀವೇನು ನಮ್ಮ ಕಾಲು ಎಳೆಯುತ್ತೀರಿ? ಐಎಂಎಫ್(IMF) ಪ್ರಕಾರ ಬಡತನ ನಿರ್ಮೂಲನೆ ಹಂತಕ್ಕೆ ಬಂದಿದೆ. 13.5 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ. ಯುವಕರ ಕನಸು ಸಾಕಾರಗೊಳಿಸೋ ಅವಕಾಶ ಸಿಕ್ಕಿದೆ ಎಂದು ಮೊದಿ ಘರ್ಜಿಸಿದರು.

ವಿಪಕ್ಷಗಳಿಗೆ ಮೋದಿ ಸಮಾಧಿ ಚಿಂತೆ

ಹಗಲು ರಾತ್ರಿ ನನ್ನನ್ನು ಬೈಯುತ್ತಲೇ ಇರ್ತಾರೆ. ವಿಪಕ್ಷಗಳು ಸದಾ ನನ್ನನ್ನು ನೆನಪಿಸಿಕೊಳ್ಳುತ್ತಾ ಇರ್ತಾರೆ. ನಮ್ಮ ಸಮಾಧಿ ಯಾವಾಗ ಅನ್ನೋದೇ ಚಿಂತೆ. ನನ್ನನ್ನು 20 ವರ್ಷಗಳಿಂದ ನಿಂದಿಸುತ್ತಿದ್ದಾರೆ. ವಿಪಕ್ಷಗಳಿಗೆ ಒಂದು ಸೀಕ್ರೆಟ್‌ ವರದಾನ ಸಿಕ್ಕಿದೆ. ಕೆಟ್ಟದನ್ನು ಯೋಚಿಸಿದ್ರೂ ಒಳ್ಳೆಯದೇ ಆಗುತ್ತೆ. ಭಾರತದ ಬಗ್ಗೆ ಒಳ್ಳೆಯ ಮಾತು ಕೇಳಲು ವಿಪಕ್ಷ ಬಯಸಲ್ಲ. ಭಾರತದ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಿದೆ ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES