Wednesday, January 22, 2025

ಮೋದಿ ದೇವರಲ್ಲ.. ಅವ್ರು ಬಂದ್ರೆ ಏನಾಗಲಿದೆ? : ಖರ್ಗೆ ಗರಂ

ನವದೆಹಲಿ : ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದಲ್ಲಿ ಭಾಷಣ ಮಾಡುತ್ತಿದ್ದಾಗ ಬಿಜೆಪಿ ಸಂಸದರು ನಿರಂತರವಾಗಿ ಘೋಷಣೆ ಕೂಗಿದ್ದಾರೆ.

ಈ ವೇಳೆ ತಾಳ್ಮೆ ಕಳೆದುಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು, ‘ಪ್ರಧಾನಿ ನರೇಂದ್ರ ಮೋದಿ ಬರುವುದರಿಂದ ಏನಾಗಲಿದೆ? ಅವರೇನು ದೇವರೇ? ಇವರು ಯಾರೂ ದೇವರಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಬಿಜೆಪಿ ಸರ್ಕಾರವನ್ನು ತರಾಟೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಇಂದು ಸದನದಲ್ಲಿ ಉತ್ತರ ನೀಡಲಿದ್ದಾರೆ.

ಒಟ್ಟು ಬಲಾಬಲ : 543

ಪ್ರಸ್ತುತ ಬಲ : 540
ಎನ್​ಡಿಎ (NDA) : 340
ಇಂಡಿಯಾ (I.N.D.I.A) : 140
ಇತರೆ : 60
ಬಹುಮತ : 271

RELATED ARTICLES

Related Articles

TRENDING ARTICLES