Monday, December 23, 2024

ಭಾರಿ ಮುಖಭಂಗ : ಸದನದಲ್ಲಿ ‘ವಿಶ್ವಾಸ ಗೆದ್ದ’ ಮೋದಿ

ನವದೆಹಲಿ : ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿದರು.

ಮಣಿಪುರ ಹಿಂಸಾಚಾರ ಸಂಬಂಧ ವಿಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ಮಂಡಿಸಿದ್ದರು. ಮೂರು ದಿನಗಳ ಚರ್ಚೆಗಳ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಭಾಷಣ ಮಾಡಿದರು.

ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೇ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಅವಿಶ್ವಾಸ ನಿರ್ಣಯವನ್ನು ಧ್ವನಿ ಮತದಿಂದ ಸೋಲಿಸುವ ಮೂಲಕ ಮೋದಿ ನೇತೃತ್ವದ ಸರ್ಕಾರ ಜಯ ದಾಖಲಿಸಿತು. ಆ ಮೂಲಕ ವಿರೋಧ ಪಕ್ಷಗಳಿಗೆ ಮುಖಭಂಗವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘ 2 ಗಂಟೆ 13 ನಿಮಿಷಗಳ ಕಾಲ ಭಾಷಣ ಮಾಡಿದರು. ಮೋದಿ ಮಾತನಾಡುವುದಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸುಧೀರ್ಘ ಭಾಷಣದ ಮೂಲಕವೇ ಉತ್ತರ ನೀಡಿದರು. ಭಾಷಣದ ವೇಳೆ ಮಣಿಪುರ ಹಿಂಸಾಚಾರದ ಬಗ್ಗೆ ಬೇಗ ಮಾತನಾಡದ ಕಾರಣ, ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಆದರೂ, ಮೋದಿ ಭಾಷಣ ಮುಂದುವರಿಸಿದರು. ಬಳಿಕ, ಸ್ಪೀಕರ್ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು. ಕೇಂದ್ರ ಸರ್ಕಾರ ಹೆಚ್ಚು ಮತ ಗಳಿಸುವ ಮೂಲಕ ಬಹುಮತ ಸಾಬೀತು ಪಡಿಸಿತು. ಅವಿಶ್ವಾಸ ನಿರ್ಣಯದಲ್ಲಿ I.N.D.I.Aಗೆ ಸೋಲಾಯಿತು.

ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಪ್ರತಿಪಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅದನ್ನು ಅಂಗೀಕರಿಸಿ, ಚರ್ಚೆಗೆ ಅವಕಾಶ ನೀಡಿದ್ದರು.

ಅಧೀರ್ ರಂಜನ್ ಅಮಾನತು

ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಾಂಗ್ರೆಸ್ ಸದಸ್ಯ ಅಧೀರ್ ರಂಜನ್ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ನಂತರ ಸ್ಪೀಕರ್ ಲೋಕಸಭಾ ಕಲಾಪವನ್ನು ನಾಳೆಗೆ ಮುಂದೂಡಿದರು.

RELATED ARTICLES

Related Articles

TRENDING ARTICLES