Wednesday, January 22, 2025

ಗುತ್ತಿಗೆದಾರರು ಮಾಡಿರುವ ಆರೋಪ ಸುಳ್ಳು : ಹೆಚ್.ಕೆ. ಪಾಟೀಲ್

ಬೆಂಗಳೂರು : ಗುತ್ತಿಗೆದಾರರ ಆರೋಪ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ. 16 ವಿಷಯ ಮಾತ್ರ ಚರ್ಚೆ ಆಗಿದೆ. ಗುತ್ತಿಗೆದಾರರ ಆರೋಪದ ವಿಚಾರ ಚರ್ಚೆ ಆಗಿಲ್ಲ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜನಪ್ರಿಯತೆ ಹೆಚ್ಚಿದೆ. ಅದಕ್ಕೆ ಇಂತಹ ಆರೋಪ ಬರ್ತಿರಬಹುದು. ಮೊದಲು 15% ಅಂದ್ರು, ಅರ್ಧಗಂಟೆ ಹಿಂದೆ 2% ಅಂತ ಕೆಂಪಣ್ಣ ಹೇಳಿದ್ರು ಅಂತ ನೀವೇ ಹೇಳ್ತೀರಾ? ಎಂದು ಗರಂ ಆಗಿದ್ದಾರೆ.

ಡಿಸಿಎಂ ಸೇರಿದಂತೆ ಯಾರ ಮೇಲೆ ಆರೋಪ ಮಾಡಿದ್ರೋ ಅದಕ್ಕೆಲ್ಲಾ ಉತ್ತರ ಕೊಡಲಾಗಿದೆ. ಬಿಲ್ ಬಿಡುಗಡೆ ಆಗಿಲ್ಲ ಅಂತ ಆರೋಪ ಮಾಡಿದ್ದಾರೆ. ಅದರೆ, ಕಮೀಷನ್ ಬಗ್ಗೆ ಎಲ್ಲೂ ಅವರು ಮಾತಾಡಿಲ್ಲ. ಈಗಾಗಲೇ ಸಂಬಂಧ ಪಟ್ಟ ಸಚಿವರು ಉತ್ತರ ಕೊಟ್ಟಿದ್ದಾರೆ. ಕಾಮಗಾರಿಗಳೇ ಆಗದೇ ಇರೋ ಬಗ್ಗೆ ತನಿಖೆ ಆಗ್ತಿದೆ ಎಂದು ಹೇಳಿದ್ದಾರೆ.

ಆರೋಪ ಮಾಡಿರೋದು ಸುಳ್ಳು

ನಮ್ಮ 5 ಗ್ಯಾರಂಟಿಗಳಿಂದ ನಮ್ಮ ವಿಶ್ವಸಾರ್ಹತೆ ಹೆಚ್ಚುತ್ತಿದೆ. ಇದರ ಯಶಸ್ಸಿನಿಂದ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಗುತ್ತಿಗೆದಾರರು ಆರೋಪ ಮಾಡಿರೋದು ಸುಳ್ಳು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದು ಅಧಾರರಹಿತ ಆರೋಪ ಮಾಡಿದ್ರೆ ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES