Sunday, January 19, 2025

ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ: ಮಹಿಳೆಯರಿಗೆ ಗಂಭೀರ ಗಾಯ!

ಹಾಸನ : ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾಗಿ  ಹದಿನೈದುಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ ಐವರು ಮಹಿಳೆಯರ ಪರಿಸ್ಥಿರಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹೆಬ್ಬಸಾಲೆ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ: ಸಾರಿಗೆ ಸಂಸ್ಥೆ ಕಚೇರಿಯಲ್ಲಿ ನೇಣಿಗೆ ಶರಣಾದ ಸಾರಿಗೆ ನಿಯಂತ್ರಕ!

ಸಕಲೇಶಪುರ ಪಟ್ಟಣದ ಸಮೀಪವಿರುವ ಕುಡಗರಗಳ್ಳಿ, ಆಚಂಗಿ, ಗ್ರಾಮದಿಂದ ಮಹಿಳಾ ಕಾರ್ಮಿಕರನ್ನು ಇಲ್ಲಿನ ಹಾರ್ಲೆ ಕಾಫಿ ತೋಟಕ್ಕೆ ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ,

ಪಿಕ್‌ಅಪ್ ವಾಹನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರಿದ್ದು ವಾಹನ ಪಲ್ಟಿಯಾದ ಪರಿಣಾಮ ಹದಿನೈದುಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ ಮತ್ತು ಐವರು ಮಹಿಳೆಯರ ಪರಿಸ್ಥಿರಿ ಗಂಭೀರವಾಗಿದ್ದು ಗಾಯಾಳುಗಳನ್ನು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES