Monday, December 23, 2024

ಸಾರಿಗೆ ಸಂಸ್ಥೆ ಕಚೇರಿಯಲ್ಲಿ ನೇಣಿಗೆ ಶರಣಾದ ಸಾರಿಗೆ ನಿಯಂತ್ರಕ!

ಬೆಳಗಾವಿ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ನಿಯಂತ್ರಕರೊಬ್ಬರು ಬೆಳಗಾವಿಯ ರಾಯಭಾಗ ಕಚೇರಿಯಲ್ಲಿಯೆ ನೇಣಿಗೆ ಶರಣಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಇದನ್ನೂ ಓದಿ: ವೃದ್ಧೆ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗೋಕಾಕ ತಾಲೂಕಿನ ಶಿಣದೋಳಿ ಗ್ರಾಮಸ್ಥರಾದ ಭಜಂತ್ರಿ ಮೃತ ದುರ್ದೈವಿ, ಭಜಂತ್ರಿ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಮಧ್ಯಾಹ್ನದವರೆಗೂ ರಾಯಭಾಗ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು, ಬುಧವಾರ ರಾತ್ರಿ ಕಚೇರಿಯ ಕಿಟಕಿಗೆ ಹಗ್ಗ ಕಟ್ಟಿ ನೇಣಿಗೆ ಕೊರಳೊಡ್ಡಿ ಸಾವಿಗೀಡಾಗಿದ್ದಾರೆ.

ಮೃತ ಭಜಂತ್ರಿ ಆತ್ಮಹತ್ಯೆಗೆ ನಿಖರವಾದ ಇನ್ನು ತಿಳಿದುಬಂದಿಲ್ಲ, ಸದ್ಯ ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES