Wednesday, October 23, 2024

ಇಂದಿನ ರಾಶಿ ಭವಿಷ್ಯ : ಯಾವ ರಾಶಿಯವರಿಗೆ ಏನು ಫಲವಿದೆ ಗೊತ್ತಾ

ದಿನ ಭವಿಷ್ಯ : ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಎಲ್ಲಾರಿಗೂ ಸದಾ ಒಳಿತೇ ಆಗುತ್ತದೆ ಎಂಬುದು ಫಲಾಫಲಗಳನ್ನು ನೀಡುತ್ತವೆ. ಆಗಸ್ಟ್ ತಿಂಗಳಲ್ಲಿ ಯಾವ ರಾಶಿಯವರಿಗೆ ಏನು ಫಲ? ಎಂಬುದನ್ನು ಇಂದಿನ ದಿನ ಭವಿಷ್ಯದಲ್ಲಿ ತಿಳಿದುಕೊಳ್ಳಿ.

ನಾಳೆ ಏನಾಗಬಹುದು ಬಲ್ಲವರು ಯಾರು, ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಎಷ್ಟೋ ಜನರು ದಿನ ಆರಂಭಿಸುವ ಮುನ್ನ ಮೊದಲು ದಿನ ಭವಿಷ್ಯ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇಟ್ಟುಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದಾಗಿದೆ. ಬುಧವಾರದ ಪಂಚಾಗದ ಪ್ರಕಾರ ಶ್ರೀ ಶೋಭಕೃತ್​ನಾಮ ಸಂವತ್ಸರ-ದಕ್ಷಿಣಾಯನ-ವರ್ಷ ಋತು-ಅಧಿಕ ಶ್ರಾವಣ ಮಾಸ-ಕೃಷ್ಣ ಪಕ್ಷದ ದಿನವಾಗಿದೆ.

ಇದನ್ನು ಓದಿ : ತಂದೆ ಬಿ.ಕೆ. ಶಿವರಾಂ ನಿವಾಸ ತಲುಪಿದ ಸ್ಪಂದನಾ ಪಾರ್ಥಿವ ಶರೀರ

ತುಲಾ ರಾಶಿ : ಉದ್ಯೋಗಸ್ಥರು ಹಿರಿಯ ಅಧಿಕಾರಿಗಳ ಪ್ರಶಂಸೆಯಿಂದಾಗಿ ಬಡ್ತಿ ಪಡೆಯುತ್ತಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಾತ್ರವಲ್ಲದೆ ಎಲ್ಲಾ ವಿಚಾರಗಳಲ್ಲಿಯೂ ಇಂದು ಮುಂಚೂಣಿಯಲ್ಲಿ ಇರುತ್ತಾರೆ. ಬಿಡುವಿನ ಸಮಯದಲ್ಲಿ ಸಮಾಜ ಸುಧಾರಣಾ ಕೆಸಗಳನ್ನು ಮಾಡುವಿರಿ. ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ವೃಶ್ಚಿಕ ರಾಶಿ : ಹಠದ ಸ್ವಭಾವ ಕುಟುಂಬದ ಬೇಸರಕ್ಕೆ ಕಾರಣವಾಗುತ್ತದೆ. ಸಿಡುಕುತನ ಬಿಟ್ಟು ಪ್ರೀತಿಯಿಂದ ವರ್ತಿಸಿದರೆ ಯಾವುದೇ ಕೆಲಸವೂ ಅಸಾಧ್ಯ ಎನಿಸದು. ಬೆಲೆ ಬಾಳುವ ವಸ್ತು ಆಭರಣಗಳಿಗೆ ಹೆಚ್ಚು ಖರ್ಚು ಮಾಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವನ್ನು ಹೊಂದುವಿರಿ. ಮನೆಯಲ್ಲಿನ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸಗಳನ್ನು ಆರಂಭಿಸಿ.

ಧನಸ್ಸು ರಾಶಿ : ಕುಟುಂಬದ ಹೊರಗು ಒಳಗೂ ಆಡುವ ಮಾತಿಗೆ ಗೌರವ ಲಭಿಸುತ್ತದೆ. ಆತ್ಮೀಯರ ಸಹಾಯದಿಂದ ಚಿಕ್ಕ ಪ್ರಮಾಣದ ಬಂಡವಾಳದೊಂದಿಗೆ ಉದ್ಯೋಮವೊಂದನ್ನು ಆರಂಭಿಸುವ ಯತ್ನ ಮಾಡುವಿರಿ. ಚಿಕ್ಕ ಮಕ್ಕಳು ಇದ್ದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ.

ಮಕರ ರಾಶಿ : ಬೇರೆಯವರ ವಿವಾದದಲ್ಲಿ ಮಧ್ಯವರ್ತಿಗಳಾದಲ್ಲಿ ವಿರೋಧ ಎದುರಿಸ ಬೇಕಾಗುತ್ತದೆ. ಸ್ವಂತ ಬಳಕೆಗಾಗಿ ವಾಹನ ಕೊಳ್ಳುವಿರಿ. ಅತಿ ಮುಖ್ಯವಾದ ಕಾರ್ಯಗಳನ್ನು ಇಂದು ಮಾಡುವಿರಿ. ಸಂಗಾತಿಯೊಂದಿಗಿನ ಮನಸ್ತಾಪ ಕೊನೆಗೊಳ್ಳುವುದು. ಮನೆಯಲ್ಲಿರುವ ಮಕ್ಕಳಿಗೆ ಬೆಣ್ಣೆ ನೀಡಿ ದಿನದ ಕೆಲಸ ಆರಂಭಿಸಿ.

ಕುಂಭ ರಾಶಿ : ನಿಮ್ಮಲಿನ ಒಳ್ಳೇತನ ದುರುಪಯೋಗವಾಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಕೊಂಚ ತಡವಾದರೂ ಪ್ರಯತ್ನಕ್ಕೆ ತಕ್ಕಂತೆ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರದು. ವಿದ್ಯಾರ್ಥಿಗಳು ನಿಮ್ಮ ಇಷ್ಟಾರ್ಥವನ್ನು ನೇರವೇರಿಸಿಕೊಳ್ಳುವುದು ಒಳ್ಳೇಯದು. ದಂತದ ವಸ್ತುಗಳನ್ನು ಬಳಿಯಲ್ಲಿ ಇರಿಸಿಕೊಂಡು ಕೆಲಸಗಳನ್ನು ಆರಂಭಿಸಿ.

ಮೀನ ರಾಶಿ : ಸಮಾಜದ ಸಂತಸ ಮತ್ತು ನೆಮ್ಮದಿಗೆ ನಿಮ್ಮ ಕೊಡುಗೆ ಹೆಚ್ಚಿನದಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಮಾತನ್ನು ಎಲ್ಲರೂ ಗೌರವಿಸುತ್ತಾರೆ. ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಸೋಲು ಗೆಲುವನ್ನು ಒಂದೇ ಭಾವನೆಯಿಂದ ಒಪ್ಪಿಕೊಳ್ಳುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ ಉಂಟಾಗುತ್ತದೆ. ಮಹಿಳೆಯರಿಗೆ ಸಿಹಿ ತಿನಿಸು ನೀಡಿ ದಿನದ ಕೆಲಸ ಆರಂಭಿಸಿ.

RELATED ARTICLES

Related Articles

TRENDING ARTICLES