ಬಾಗಲಕೋಟೆ: ಪವರ್ ಟಿವಿಯಲ್ಲಿ ಸಚಿವರೊಬ್ಬರ ಕರ್ಮಕಾಂಡ ಬಯಲಿಗೆಳೆಯುವ ಮುನ್ನವೇ ಪ್ರಸಾರ ಮಾಡದಂತೆ ಕೋರ್ಟ್ ನಿಂದ ಸ್ಟೇ ತಂದಿರುವುದು ರಾಜಕೀಯ ಇತಿಹಾಸದಲ್ಲೇ ಇದೇ ಮೊದಲು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಇದನ್ನೂ ಓದಿ: ನೂತನ ಗ್ರಾ.ಪಂ. ಅಧ್ಯಕ್ಷನಿಗೆ ಬಿಯರ್ ಅಭಿಷೇಕ!
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ (ಕಾಂಗ್ರೆಸ್ಸಿಗರು) ಕೋರ್ಟ್ ಗೆ ಹೋಗಿ ಸ್ಟೇ ತಂದಿರೋದು ಆಶ್ಚರ್ಯಕರ ಸಂಗತಿ. ಸಿಡಿ ಸೇರಿದಂತೆ ನೈತಿಕತೆ ಪ್ರಶ್ನೆ ಬಂದಾಗ ಕೋರ್ಟ್ ಮೊರೆ ಹೋಗಿ ಸ್ಟೇ ತಂದಿದ್ದು ನೋಡಿದ್ದೀವಿ. ಆದರೇ, ಭ್ರಷ್ಟಾಚಾರ ಪ್ರಸಾರ ಮಾಡದಂತೆ ಕೋರ್ಟ್ ನಿಂದ ಸ್ಟೇ ತಂದದ್ದು ಇದು ಇತಿಹಾಸ, ರಾಜ್ಯ ರಾಜಕಾರಣದ 75 ವರ್ಷ ನಂತರ ಇದೇ ಮೊದಲು ಎಂದರು.
ಆರೋಪ ಬಂದರೇ ತನಿಖೆ ಮಾಡಿಸಲಿ, ಬೇಕಿದ್ದರೆ ಕ್ರಮ ಕೈಗೊಳ್ಳಲಿ ಅದನ್ನು ಬಿಟ್ಟು ಭ್ರಷ್ಟಾಚಾರ ಕುರಿತು ವರದಿ ಪ್ರಸಾರ ಮಾಡದಂತೆ ತಡೆ ತಂದಿರುವುದು ಸರಿಯಲ್ಲಿ ಎಂದು ಭ್ರಷ್ಟಾಚಾರ ಎಸಗಿದ ಸಚಿವರ ಹೇಸರು ಹೇಳದೆ ಆಕ್ಷೇಪ ವ್ಯಕ್ತಪಡಿಸಿದರು. ಇನ್ನಾದರು ಅವರು ವರದಿಯ ಸತ್ಯಾ-ಸತ್ಯತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದ ಮಾಜಿ ಸಚಿವ ಕಾರಜೋಳ ಹೇಳಿದರು.