Monday, December 23, 2024

ಸರ್.. ನನ್ನ ಗಂಡ ಚಿನ್ನ ಕದ್ದಿದ್ದಾನೆ ಎಂದು ಠಾಣೆ ಮೆಟ್ಟಿಲೇರಿದ ಹೆಂಡ್ತಿ

ಮಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನ ಮನೆ ತೊರೆದು ತವರು ಮನೆ ಸೇರಿದ್ದ ಹೆಂಡ್ತಿಯೊಬ್ಬಳು ಪತಿ ವಿರುದ್ಧವೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಮಂಗಳೂರು ಜಿಲ್ಲೆಯ ಕದ್ರಿ ಪೊಲೀಸ್​ ಠಾಣೆಯಲ್ಲಿ ಈ ವಿಭಿನ್ನ ಪ್ರಕರಣ ದಾಖಲಾಗಿದೆ. ಪತಿಯೇ ಚಿನ್ನಾಭರಣ ಕಳವು ಮಾಡಿದ್ದಾಗಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಕದ್ರಿ ನಿವಾಸಿ ಇಲ್ಯಾಸ್​ ಹಾಗೂ ಪತ್ನಿ ಮಧ್ಯೆ ಕಲಹ ಉಂಟಾಗಿತ್ತು. ಈ ದಂಪತಿ ಕದ್ರಿ ಕೆಪಿಟಿ ಬಳಿಯ ಫ್ಲಾಟ್​ನಲ್ಲಿ ವಾಸವಿದ್ದರು. ಮದುವೆ ಸಮಯದಲ್ಲಿ ಇಲ್ಯಾಸ್​ಗೆ ವರದಕ್ಷಿಣೆ ರೂಪದಲ್ಲಿ ಅರ್ಧ ಕಿಲೋಗೂ ಹೆಚ್ಚು ಚಿನ್ನ ನೀಡಿದ್ದರು. ಆ ಚಿನ್ನವನ್ನು ಇಲ್ಯಾಸ್​ ಪತ್ನಿ ಮನೆಯ ಕಪಾಟಿನಲ್ಲಿಟ್ಟಿದ್ದಳು.

ಬ್ಯಾಂಕಿನಲ್ಲಿ 28 ಲಕ್ಷ ರೂ. ಸಾಲ

ಗಂಡ-ಹೆಂಡತಿ ಮಧ್ಯೆ ಜಗಳ ಇಬ್ಬರನ್ನೂ ದೂರ ಮಾಡಿತ್ತು. ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ವಾಸವಿದ್ದಳು. ವಾರದ ಹಿಂದೆ ಗಂಡನ ಫ್ಲಾಟ್​ಗೆ ತೆರಳಿ ನೋಡಿದಾಗ 75 ಪವನ್ ಚಿನ್ನ ಕಾಣೆಯಾಗಿತ್ತು. ಈ ಬಗ್ಗೆ ಗಂಡ ಇಲ್ಯಾಸ್​ನನ್ನು ಕೇಳಿದಾಗ, ನಾನೇ ಚಿನ್ನ ಕಳವು ಮಾಡಿಕೊಂಡು ಹೋಗಿದ್ದೇನೆ. ಏನು ಮಾಡ್ತೀಯಾ? ಎಂದು ಧಮ್ಕಿ ಹಾಕಿದ್ದಾನೆ.

ಚಿನ್ನವನ್ನು ಅಡವಿಟ್ಟು ಬ್ಯಾಂಕಿನಲ್ಲಿ 28 ಲಕ್ಷ ರೂಪಾಯಿ ಸಾಲ ಪಡೆದಿರುವುದು ಪತ್ನಿ ಗಮನಕ್ಕೆ ಬಂದಿದೆ. ಅಲ್ಲದೆ, ಬಡ್ಡಿ ಕಟ್ಟಲು ಪ್ರಭಾಕರ್ ಎಂಬಾತನಿಗೆ ಇಲ್ಯಾಸ್​ ತಿಳಿಸಿದ್ದನು. ಪ್ರಭಾಕರ್ 12 ಲಕ್ಷದ ಚಿನ್ನವನ್ನು ಪಡೆದು ಮಾರಾಟ ಮಾಡಿದ್ದಾನೆ ಎಂದು ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

RELATED ARTICLES

Related Articles

TRENDING ARTICLES