ಕೇರಳ ಹೆಸರು ಬದಲಾವಣೆಗೆ ಎಡರಂಗ ಪಕ್ಷ ನಿರ್ಣಯ ಮಂಡನೆ!

ಕೇರಳ : ಕೇರಳ ರಾಜ್ಯದ ಹೆಸರು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಮಸೂದೆಗೆ ಕೇರಳ ವಿಧಾನಸಭೆ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: ಭ್ರಷ್ಟಾಚಾರ ವರದಿ ಪ್ರಸಾರ ಮಾಡದಂತೆ ಸ್ಟೇ ತಂದಿರುವುದು ಇದೇ ಮೊದಲು: ಕಾರಜೋಳ

ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್​ ಹಾಗೂ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಕೇರಳ ಎನ್ನುವ ಹೆಸರನ್ನು ಕೇರಳಂ ರಾಜ್ಯ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ಮಸೂದೆಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.

ವಿಪಕ್ಷ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಮಸೂದೆಗೆ ಯಾವುದೇ ತಿದ್ದುಪಡಿ ಹಾಗೂ ಮಾರ್ಪಾಡುಗಳನ್ನೂ ಸೂಚಿಸದ ಕಾರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ವಿಧಾನಸಭೆಯಲ್ಲಿ ನಿರ್ಣಯವನ್ನೂ ಮಂಡಿಸಿದ್ದಾರೆ. ನಿಲುವಳಿಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸಭಾಧ್ಯಕ್ಷ ಎ.ಎಂ. ಶಂಶೀರ್​ ಘೋಷಿಸಿದ್ದಾರೆ.

RELATED ARTICLES

Related Articles

TRENDING ARTICLES