Sunday, January 19, 2025

ಕಾರು-ಬೈಕ್​ ನಡುವೆ ಅಪಘಾತ: ಬೈಕ್​ ಸವಾರ ಚಿಂತಾಜನಕ!

ರಾಮನಗರ : ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದ ಜಯಪುರ ಗೇಟ್​ ಅಂಡರ್​ ಪಾಸ್​ ಬಳಿ ನಡೆದಿದೆ.

ಇದನ್ನೂ ಓದಿ: ಗ್ರಾ.ಪಂ ಕಚೇರಿಯಲ್ಲಿ ಸದಸ್ಯರ ಮಾರಾಮಾರಿ!: ಚುನಾವಣೆ ಮುಂದೂಡಿಕೆ

ರಾಮನಗರ ತಾಲ್ಲೂಕಿನ ಅಕ್ಕೂರು ಗ್ರಾಮದ ನಿವಾಸಿ ರವಿ (35) ಗಾಯಾಳು, ಬೆಂಗಳೂರು-ಮೈಸೂರು ಹೆದ್ದಾರಿಯ ಜಯಪುರ ಗೇಟ್​​ನ ಅಂಡರ್ ಪಾಸ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ರಭಸವಾಗಿ ಬಂದ ಬ್ರಿಜಾ ಕಾರು ಡಿಕ್ಕಿ ಹೊಡೆದಿದೆ, ಅಪಘಾತದಿಂದ ಬೈಕ್​ ಸವಾರ ರವಿಗೆ ಗಂಭೀರ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES