Monday, December 23, 2024

ರಾತ್ರಿ 11.25ಕ್ಕೆ ಸ್ಪಂದನಾ ಪಾರ್ಥಿವ ಶರೀರ ರವಾನೆ

ಬೆಂಗಳೂರು : ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ಇಂದು ರಾತ್ರಿ 11.25ಕ್ಕೆ ಬೆಂಗಳೂರಿಗೆ ರವಾನೆಯಾಗಲಿದೆ.

ಥಾಯ್ ಏರ್ ಲೈನ್ಸ್​ಗೆ ಸೇರಿದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮೃತದೇಹ ತರಲಾಗುತ್ತಿದೆ. ಥೈಲ್ಯಾಂಡಿನ ಸುವರ್ಣ ಭೂಮಿ ವಿಮಾನ ನಿಲ್ದಾಣದಿಂದ ರಾತ್ರಿ 9.20ಕ್ಕೆ ಹೊರಡಲಿರುವ ವಿಮಾನ, ರಾತ್ರಿ 11.10ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ.

ವಿಮಾನ ನಿಲ್ದಾಣದ ಡಬ್ಲ್ಯೂಎಫ್​ಎಸ್​(WFS) ಏರ್ ಕಾರ್ಗೋ ಟರ್ಮಿನಲ್​ಗೆ ಬರಲಿರುವ ಮೃತದೇಹವನ್ನು ನಿಯಮಾನುಸಾರ ಸ್ಕ್ಯಾನ್ ಮಾಡಿ ದಾಖಲೆ ಪರಿಶೀಲನೆ ಮಾಡಲಾಗುತ್ತದೆ.ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಕುಟುಂಬಸ್ಥರಿಗೆ ಸ್ಪಂದನಾ ಅವರ ಮೃತದೇಹ ಹಸ್ತಾಂತರಿಸಲಾಗುವುದು.

ಇದೇ ವಿಮಾನದಲ್ಲಿ ನಟ ವಿಜಯ್ ರಾಘವೇಂದ್ರ ಹಾಗೂ ಇತರೆ ಸಂಬಂಧಿಕರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಗೆ ಚಿನ್ನೇಗೌಡ್ರು ಆಗಮಿಸಿದ್ದಾರೆ. ಮನೆಗೆ ತಂದ ಶವಪಟ್ಟಿಗೆಯನ್ನು ತರಲಾಗಿದೆ.

ಶಿವರಾಂ ಮನೆ ಮುಂದೆ ಸ್ಪಂದನಾ ಅಂತಿಮ ದರ್ಶನಕ್ಕೆ ವೇದಿಕೆ ವ್ಯವಸ್ಥೆ ಮಾಡಲಾಗಿದೆ. ನಟ ಶ್ರೀಮುರುಳಿ ಸಿದ್ದತೆ ನೋಡಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES