Saturday, May 18, 2024

ಲೋಕಸಭೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಸಂಸದ ಶ್ರೀಕಾಂತ್ ಶಿಂಧೆ

ನವದೆಹಲಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಪುತ್ರ, ಸಂಸದ ಶ್ರೀಕಾಂತ್ ಶಿಂಧೆ ಇಂದು ಲೋಕಸಭೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಆ ಮೂಲಕ ಕೆಣಕಿದ ಪ್ರತಿಪಕ್ಷದ ಸಂಸದರಿಗೆ ಲೋಕಸಭೆಯಲ್ಲೇ ಉತ್ತರಿಸಿದ್ದಾರೆ.

ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಹಿಂದುತ್ವ ಮತ್ತು ಬಾಳ್ ಠಾಕ್ರೆಯವರ ಸಿದ್ಧಾಂತವನ್ನು ತೊರೆದಿರುವುದಕ್ಕೆ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ 2019ರಲ್ಲಿ ಶಿವಸೇನಾ-ಬಿಜೆಪಿ ಮೈತ್ರಿಕೂಟಕ್ಕೆ ಜನರು ಬಹುಮತ ನೀಡಿದ್ದರು. ಆದರೆ, ಉದ್ದವ್ ಠಾಕ್ರೆ ಕಾಂಗ್ರೆಸ್, NCP ತೆ ಸೇರುವ ಮೂಲಕ ಮತದಾರರಿಗೆ ಅನ್ಯಾಯ ಮಾಡಿದರು. ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಬಾಳಾ ಸಾಹೇಬ್ ಸಿದ್ದಾಂತ ಮತ್ತು ಹಿಂದುತ್ವ ಸಿದ್ದಾಂತವನ್ನು ಗಾಳಿಗೆ ತೂರಿದರು ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ 1990ರಲ್ಲಿ ಕರ ಸೇವಕರನ್ನೆ ಸುಟ್ಟ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಸಂಸದ ಶ್ರೀಕಾಂತ್ ಶಿಂಧೆ ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES