Sunday, December 22, 2024

‘ಬ್ರಾಂಡ್ ಬೆಂಗಳೂರು’ ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಿಸಿಕೊಳ್ಳಲಾ? : ಸಿ.ಟಿ. ರವಿ

ಬೆಂಗಳೂರು : ದಿನಾ ಬೆಳಗ್ಗೆ ಬ್ರಾಂಡ್ ಬೆಂಗಳೂರು ಅಂತಿದ್ದಾರೆ. ಅವರೇ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಾರೆ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 1,500 ಕೋಟಿ ಆಸ್ತಿ ಬ್ಯುಸಿನೆಸ್ ಮಾಡಿ ಗಳಿಸಿದೆ ಅಂದಿದ್ದಾರೆ. ಬ್ರಾಂಡ್ ಬೆಂಗಳೂರು ಹೆಸರಲ್ಲಿ 15 ಸಾವಿರ ಕೋಟಿಗೆ ಏರೋದಿಲ್ಲ ಅನ್ನೋ ಅನುಮಾನ ಯಾರಿಗಾದ್ರೂ ಇದೆಯಾ? ಬ್ರಾಂಡ್ ಬೆಂಗಳೂರು ಯೋಜನೆ ಬೆಂಗಳೂರು ಜನರಿಗಿಂತ, ತನ್ನ ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಿಸಿಕೊಳ್ಳಲಾ? ಎಂದು ಕುಟುಕಿದ್ದಾರೆ.

ಸದನ ಸಮಿತಿ ನೈಸ್ ವಿಚಾರದಲ್ಲಿ ವರದಿ ಟೇಬಲ್ ಮಾಡಿದೆ. ಅದರ ವರದಿ ಪರಿಗಣಿಸಬೇಕಲ್ವಾ?ಬ್ರಾಂಡ್ ಬೆಂಗಳೂರು ಇದರ ಪರಿದಿಯಲ್ಲಿ ಬರಲ್ವಾ? ಟನಲ್ ರೋಡ್, ಫೆರಿಫೆರಲ್ ರೋಡ್ ಅಂತೆಲ್ಲಾ ಹೇಳ್ತಿದ್ದಾರೆ. ಬ್ರಾಂಡ್ ಬೆಂಗಳೂರು ಬ್ಯುಸಿನೆಸ್ ಆಗಬಾರದು. ಬೆಂಗಳೂರು ಜನರಿಗೆ ಅನುಕೂಲ ಆಗಬೇಕು. ಇದರ ಬಗ್ಗೆ ಸಂಶಯ ಬರಲಿದೆ ಎಂದು ಛೇಡಿಸಿದ್ದಾರೆ.

ಡಿಕೆಶಿನೇ ಬೇರೆಯವರನ್ನು ಹೆದರಿಸೋರು

40% ಅಂತ ನಮ್ಮ ಮೇಲೆ ಆರೋಪ ಮಾಡಿದ್ರಿ. ನೀವು ಪ್ರಮಾಣಿಕರಿದ್ರೆ ಹಣ ಬಿಡುಗಡೆ ಮಾಡಿ. ಎಷ್ಟು ದಿನದಲ್ಲಿ ತನಿಖೆ ಮಾಡಿ ವರದಿ ಕೊಡಿ ಅಂತ ಹೇಳಿ. ಅದರ ಮೇಲೆ ಹಣ ಬಿಡುಗಡೆ ಮಾಡಿ. ಡಿಕೆಶಿ ಅವರನ್ನು ಹೆದರಿಸಲು ಸಾಧ್ಯವಿಲ್ಲ, ಅವರೇ ಬೇರೆಯವರನ್ನು ಹೆದರಿಸೋರು. ಗುತ್ತಿಗೆದಾರರು ಅವರನ್ನು ಹೆದರಿಸೋ ಕೆಲಸ ಮಾಡಬೇಡಿ. SIT ರಚನೆ ಮಾಡಿರೋದೇ ಬ್ಲಾಕ್ ಮೇಲ್ ಮಾಡೋದಕ್ಕೆ ಎಂದು ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES