Monday, December 23, 2024

ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ!

ಬೆಂಗಳೂರು : ಸ್ಯಾಂಡಲ್​ ವುಡ್​ ನಟ ವಿಜಯ್​ ರಾಘವೇಂದ್ರ ಪತ್ನಿಗೆ ಹೃದಯಾಘತವಾಗಿದ್ದು ಬ್ಯಾಂಕಾಕ್​ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದ ಸ್ಯಾಂಡಲ್​ ವುಡ್​ ಗೆ ಭಾರಿ ಆಘಾತವಾಗಿದೆ.

ಇದನ್ನೂ ಓದಿ: ಕಾಲು ಜಾರಿಬಿದ್ದ ಸಾಲುಮರದ ತಿಮ್ಮಕ್ಕ: ಬೆನ್ನುಮೂಳೆಗೆ ಪೆಟ್ಟು, ಆಸ್ಪತ್ರೆಗೆ ದಾಖಲು!

ಇತ್ತೀಚೆಗೆ ಯೂರೋಪ್​ ಪ್ರವಾಸ ಕೈಗೊಂಡಿದ್ದ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ, ಬ್ಯಾಂಕಾಕ್ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತ ಸ್ಪಂದನಾ ತಮ್ಮ ಮಗ ಶೌರ್ಯರನ್ನು ಅಗಲಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಪುತ್ರಿ ಸ್ಪಂದನ 2007 ರಲ್ಲಿ ವಿಜಯ ರಾಘವೇಂದ್ರರನ್ನು ವಿವಾಹವಾಗಿದ್ದರು. ಸ್ಪಂದನಾ ವಿಜಯ ರಾಘವೇಂದ್ರ ಸಾವಿನ ಕುರಿತು ವಿಜಯ ರಾಘವೇಂದ್ರ ಅವರ ತಂದೆ ಚಿನ್ನೇಗೌಡ ಅವರು ಪವರ್​ ಟಿವಿಗೆ ಸ್ಪಷ್ಟ ಪಡಿಸಿದ್ದಾರೆ.

ನಾಳೆ ಬ್ಯಾಂಕಾಕ್​ ನಿಂದ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ ತರಲಾಗುವುದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಾಗಿದೆ.

RELATED ARTICLES

Related Articles

TRENDING ARTICLES