Sunday, December 22, 2024

ಸಿಂಹ ವಾಹನ ಗಣೇಶನನ್ನು ಪೂಜಿಸುವುದರಿಂದ ಸಾಲಭಾದೆ ನಿವಾರಣೆ

ಬೆಂಗಳೂರು : ಪ್ರಥಮ ಪೂಜಿತನು, ವಿಘ್ನ ನಿವಾರಕ, ಇಡೀ ಜಗತ್ತಿನೆಲ್ಲೆಡೆ ವಿಜೃಂಭಣೆಯಿಂದ ಆರಾಧಿಸಲ್ಪಡುವವನು, ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ಮಾಡಬೇಕೆಂದರೆ ಮೊದಲಿಗೆ ಶ್ರೀ ಸಿದ್ಧಿವಿನಾಯಕನನ್ನು ಪೂಜಿಸಲೇಬೇಕು.

ಹಾಗಿದ್ರೆ, ಈ ಬಾರಿ ಗಣೇಶ ಚತುರ್ಥಿ ಯಾವಾಗ? ಯಾವ ವಾಹನದ ಮೇಲೆ ಕುಳಿತಿರುವ ವಿನಾಯಕನ್ನು ಪೂಜಿಸಬೇಕು? ಸಿಂಹ ವಾಹನದ ಮೇಲೆ ಕುಳಿತಿರುವ ಶ್ರೀ ವರಸಿದ್ಧಿ ವಿನಾಯಕನನ್ನು ಪೂಜಿಸುವುದರಿಂದ ಯಾವ ಫಲ ಲಭಿಸುತ್ತದೆ? ಎಂಬ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ಸಿಂಹವಾಹನದ ಮೇಲೆ ಕುಳಿತಿರುವ ಶ್ರೀ ವರಸಿದ್ಧಿ ವಿನಾಯಕನನ್ನು ಪೂಜಿಸುವುದು ಅತ್ಯಂತ ಶ್ರೇಷ್ಠದಾಯಕವಾಗಿದೆ. ಸಿಂಹ ವಾಹನ ಗಣೇಶನನ್ನು ಪೂಜಿಸುವುದರಿಂದ ಮನುಷ್ಯನ ಸಕಲ ಪಾಪಗಳು ನಾಶವಾಗುತ್ತವೆ. ಆ ಸ್ಥಳದಲ್ಲಿರುವ ದುಷ್ಟಶಕ್ತಿಗಳ ನಾಶವಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

ಶನಿಪ್ರಭಾವಗಳು ದೂರ

ಸಿಂಹವಾಹನ ಗಣೇಶನನ್ನು ಪೂಜಿಸುವುದರಿಂದ ಜಾತಕದಲ್ಲಿ ಉಂಟಾದ ರಾಹು ದೋಷ ಮತ್ತು ಶನಿಪ್ರಭಾವಗಳು ದೂರವಾಗುತ್ತವೆ. ಸಿಂಹವಾಹನ ಗಣೇಶನನ್ನು ಪೂಜಿಸುವುದರಿಂದ ಸಾಲಭಾದೆ ದೂರವಾಗುತ್ತವೆ. ವಿದ್ಯಾರ್ಥಿಗಳಲ್ಲಿ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ರೈತರುಗಳು ಆರಾಧನೆ ಮಾಡುವುದರಿಂದ ಬೆಳೆಗಳು ಸಮೃದ್ಧಿಯಾಗುತ್ತವೆ ಎಂದು ಶ್ರೀಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸ್ಮರಣಾ ಶಕ್ತಿ ಹೆಚ್ಚು

ಯಾರಿಗೆ ಶೀಘ್ರ ವಿವಾಹ ಪ್ರಾಪ್ತಿ?

ಮಣ್ಣಿನ ಮೂರ್ತಿ ಯಾವ ರೀತಿ ಇರಬೇಕು?

ಸ್ವರ್ಣಗೌರಿ ವ್ರತ ಯಾವಾಗ ಆಚರಿಸಬೇಕು?

ಈ ಬಾರಿ ಸೆಪ್ಟಂಬರ್ 18ರಂದು ಮಧ್ಯಾಹ್ನ 12.38ಕ್ಕೆ ಗಣೇಶ ಚತುರ್ಥಿ ತಿಥಿ ಆರಂಭವಾಗಿ ಸೆ.19ರಂದು ಮಧ್ಯಾಹ್ನ 1.25ಕ್ಕೆ ಮುಕ್ತಾಯವಾಗಲಿದೆ. ಸೂರ್ಯ ಸಿದ್ಧಾಂತದ ಆಧಾರದ ಮೇಲೆ ಸೆ.18ರಂದು ಮಧ್ಯಾಹ್ನ ವ್ಯಾಪಿನಿ ಮತ್ತು ಯಾಮದ್ವಯ ವ್ಯಾಪಿನಿ ದೊರಕುವುದರಿಂದ ಆ ದಿನವೇ ಸ್ವರ್ಣಗೌರಿ ವ್ರತ ಮತ್ತು ವರಸಿದ್ದಿ ವಿನಾಯಕನ ವ್ರತವನ್ನು ಆಚರಿಸುವುದು ತುಂಬಾ ಪುಣ್ಯಕರವಾಗಿದೆ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES