Sunday, December 22, 2024

ಇಂದಿನ ರಾಶಿ ಭವಿಷ್ಯ ; ನಿಮ್ಮ ದಿನ ಭವಿಷ್ಯ ಹೇಗಿದೆ ಗೊತ್ತಾ ?

ದಿನ ಭವಿಷ್ಯ : ಮಾರ್ಚ್​ 7ರ ಮಂಗಳವಾರ ಇಂದು ಸೂರ್ಯನ ಚಿಹ್ನೆ ಹೊಂದಿರುವ ಸಿಂಹದಲ್ಲಿ ಚಂದ್ರನು ಸಾಗುತ್ತಿದ್ದು, ಪೂರ್ವ ಫಾಲ್ಗುಣಿ ನಕ್ಷತ್ರದ ಪ್ರಭಾವ ಇಂದು ಜಾಸ್ತಿಯಾಗಿರುತ್ತದೆ.ಜೊತೆಗೆ ಫಾಲ್ಗುಣ ಪೂರ್ಣಿಮೆಯ ದಿನದೊಂದು ಶನಿ,ಬುಧ,ಸೂರ್ಯನ ತ್ರಿಗ್ರಾಹಿ ಯೋಗವು ಕುಂಭ ಇಂದು ರಾಶಿಯಲ್ಲಿರುತ್ತದೆ.

ಇಂದು ಗುರು ಮತ್ತು ಶುಕ್ರರು ಮೀನ ರಾಶಿಯಲ್ಲಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವೃಷಭ ರಾಶಿ ಮತ್ತು ಕರ್ಕಾಟಕ ರಾಶಿಯವರಿಗೆ ಶುಭ ಮತ್ತು ಲಾಭದಾಯಕವಾಗಿರುತ್ತದೆ. ಹಾಗದರೇ ಈ ದಿನವು ಹೇಗಿರುತ್ತದೆ? ಹಾಗೂ ನಿಮಗಿಂದು ಶುಭದಿನವೇ ? ಅಥವಾ ಅಶುಭವೇ ? ಎಂದು ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ತಿಳಿದುಕೊಳ್ಳಿ.

ಇದನ್ನು ಓದಿ : ಕಾಲು ಜಾರಿಬಿದ್ದ ಸಾಲುಮರದ ತಿಮ್ಮಕ್ಕ: ಬೆನ್ನುಮೂಳೆಗೆ ಪೆಟ್ಟು, ಆಸ್ಪತ್ರೆಗೆ ದಾಖಲು!

ಮೇಷ : ಹೋಳಿ ಹುಣ್ಣಿಮೆಯಾಗಿದ್ದರಿಂದ ಈ ದಿನ ನಿಮ್ಮ ಮನೆಯಲ್ಲಿ ಸಂಭ್ರಮದ ವಾತವರಣವಿರುತ್ತದೆ. ಭೂ ಆಸ್ತಿಗೆ ಸಂಭವಿಸಿದ ಯಾವುದೇ ಸಮಸ್ಯೆ ಇದ್ದರು ಅದು ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಕೊನೆಗೊಳ್ಳುತ್ತದೆ. 21 ಮಂಗಳವಾರದವರೆಗೆ ಹನುಮನ ಪೂಜೆ ಮಾಡಿ ಬೆಲ್ಲ ಮತ್ತು ಕಾಳುಗಳನ್ನು ಅರ್ಪಿಸಿ.

ವೃಷಭ : ನಿಮ್ಮ ಪ್ರೇಮದ ಜೀವನದಲ್ಲಿ ಕೆಲವು ಸಾಹಸಗಳನ್ನು ಮಾಡುತ್ತೀರಿ. ಇಂದು ಹವಾಮಾನಗುಣದಿಂದಾಗಿ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರೋಗ್ಯದ ಸಮಸ್ಯೆಗಳಿಗೆ ನಾರಾಯಣನ ಕವಚವನ್ನು ಪಠಿಸಿ.

ಮಿಥುನ : ಈ ರಾಶಿಯವರಿಗೆ ಇಂದು ಕೌಟುಂಬಿಕ ಜೀವನದಲ್ಲಿ ವೈರಾಗ್ಯದ ಪರಿಸ್ಥಿತಿ, ಈ ಕಾರಣದಿಂದ ನೀವು  ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ.  ಉದ್ಯೋಗಿಗಳ ಪ್ರಭಾವದ ವಲಯದಲ್ಲಿ ಹೆಚ್ಚಳವಿದೆ. ತಂದೆ ತಾಯಿ ಆರ್ಶಿವಾದ ಪಡೆದು ಕೆಂಪು ಹಸುವಿಗೆ ರೊಟ್ಟಿ ನೀಡಿ.

ಕಟಕ : ಈ ಸಂಜೆ ನೀವು ಶಾಪಿಂಗ್ ಮಾಡುತ್ತಿರಿ, ನಿಮ್ಮ ಬಜೆಟ್​ಗಿಂತ ಹೆಚ್ಚು ವೆಚ್ಚವಾಗುತ್ತದೆ. ಭೌತಿಕ ಸುಖಗಳು ಜಾಸ್ತಿಯಾಗುವಂತಿವೆ. ಆದರೆ ಕೋಪ ಮತ್ತು ಅಸಹನೆಯನ್ನು ನಿಯಂತ್ರಿಸಿ. ಶಿವ ಚಾಲೀಸ ಪಠಿಸಿ, ಅನ್ನದಾನ ಮಾಡಿ.

ಸಿಂಹರಾಶಿ : ಉದ್ಯೋಗ ಕ್ಷೇತ್ರಗಳಲ್ಲಿ ಅಸ್ಥಿರತೆಯಿಂದ ಕೆಲವು ಸಮಸ್ಯೆಗಳು ಉದ್ಭವಿಸಬಹುದು, ಇದರಿಂದ ಮನಸ್ಸು ಚಂಚಲವಾಗಿರುತ್ತದೆ. ನೀವು ಜವಬ್ದಾರಿ ವಹಿಸಿಕೊಂಡಿರುವ ಸರ್ಕಾರಿ ಕೆಲಸ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇಂದು ದೇವಸ್ಥಾನದಲ್ಲಿ ಹನುಮನ ದರ್ಶನ ಪಡೆಯಿರಿ.

ಕನ್ಯಾರಾಶಿ : ಇಂದು ಪ್ರೀತಿಯ ಜೀವನದಲ್ಲಿ ಹೊಸ ಶಕ್ತಿ ತುಂಬುತ್ತದೆ ಮತ್ತು ತಂದೆಯ ಬೆಂಬಲ ಕೂಡ ಇರುತ್ತದೆ. ಜನರು ತಮ್ಮ ಕೆಲಸದ ಸ್ಥಳಗಳಲ್ಲಿ ನಿಮ್ಮ ಕಾರ್ಯಶೈಲಿಯಿಂದ ಪ್ರಭಾವಿತರಾಗುತ್ತಿರಿ, ಮತ್ತು ನಿಮ್ಮನ್ನು ಗೌರವಿಸುತ್ತಾರೆ. ಅರಳಿ ಮರಕ್ಕೆ ಹಾಲು ಮಿಶ್ರಿತ ನೀರನ್ನು ಅರ್ಪಿಸಿ.

ತುಲಾ ರಾಶಿ : ಇಂದು ಕುಟುಂಬದಲ್ಲಿ ಯಾರೊಬ್ಬರಿಂದಲಾದರು ಸಿಹಿ ಸುದ್ಧಿ ತಿಳಿಯುವಿರಿ. ಇಂದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸ್ವಲ್ಪ ಮೀನುಗಳಿಗೆ ಆಹಾರ ನೀಡಿ ಒಳ್ಳೆದಾಗುತ್ತದೆ.

ವೃಶ್ಚಿಕ ರಾಶಿ : ವಿದ್ಯಾರ್ಥಿಗಳು ಶಿಕ್ಷಕರ ಸಹಕಾರವನ್ನು ಪಡೆಯುತ್ತಿರಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ಇಂದು ಸಂಜೆ ಕುಟುಂಬದೊಂದಿಗೆ ಹೋಳಿ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀರಿ, ಹನುಮಾನ್ ಚಾಲಿಸ್ ಪಠಿಸಿ.

ಧನು ರಾಶಿ : ಇಂದು ದೈಹಿಕ ಸೌಕರ್ಯಗಳಲ್ಲಿ ಕೊರತೆ ಕಾಣುತ್ತಿರಿ. ಈ ಸಂಜೆ ಧರ್ಮ ಮತ್ತು ಆಧ್ಯಾತ್ಮೀಕತೆಯ ಮೇಲೆ ಕಳೆಯಲಾಗುತ್ತದೆ. ಮಂಗಳವಾರದೊಂದು ಉಪವಾಸವಿದ್ದು, ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ.

ಮಕರ ರಾಶಿ : ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಸ್ಯೆಯಾಗಬಹುದು, ಆದ್ದರಿಂದ ಎಚ್ಚರದಿಂದಿರಿ. ಯಾವುದೇ ಶುಭ ಕಾರ್ಯಕ್ರಮವನ್ನು ಕುಟುಂಬದೊಂದಿಗೆ ಚರ್ಚಿಸಬಹುದು. ಉಪವಾಸವಿದ್ದು ಸುಂದರಕಾಂಡ ಪಠಿಸಿ.

ಕುಂಭ ರಾಶಿ : ಇಂದು ಯಾವುದೇ ಸಮಸ್ಯೆ ನೆಡೆಯುತ್ತಿದ್ದರು, ಅದನ್ನು ತೊಡೆದು ಹಾಕುತ್ತೀರಿ. ಮತ್ತು ಭ್ರಮೆಯನ್ನು ತೊಡೆದುಹಾಕಲು ಹೊಸಮಾರ್ಗ ಕಂಡುಕೊಳ್ಳುವೀರಿ. ತಂದೆಯೊಂದಿಗಿನ ಸಮಸ್ಯೆಗಳು ಸುಧಾರಿಸುತ್ತವೆ. ಹನುಮನ್ ಚಾಲೀಸಾ 108 ಭಾರಿ ಪಠಿಸಿ.

ಮೀನ ರಾಶಿ : ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ಇಂದು ಕೊನೆಗೊಳ್ಳುತ್ತದೆ. ನೀವು ಯಾವುದೇ ಸಾಲವನ್ನು ಪಡೆದಿದ್ದರು ಸಹ ಇಂದು ಅದರಿಂದ ಮುಕ್ತರಾಗುತ್ತೀರಿ. ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ.

RELATED ARTICLES

Related Articles

TRENDING ARTICLES