Wednesday, January 22, 2025

ಅರಮನೆ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿರ್ಬಂಧ

ಬೆಂಗಳೂರು : ಮೈಸೂರು ಅರಮನೆಯ ಹೊರಾಂಗಣದಲ್ಲಿ ಡೋನ್ ಕ್ಯಾಮೆರಾ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಅರಮನೆ ಆಡಳಿಯ ಮಂಡಳಿಯಿಂದ ಆದೇಶ ಹೊರಡಿಸಿದೆ. ಅರಮನೆಯು ಸುತ್ತಮುತ್ತ ಪ್ರದೇಶ ಹಳದಿ ವಲಯ ಅಂತ ಘೋಷಣೆ ಮಾಡಲಾಗಿದೆ ಎಂದು ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಮಣ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಅರಮನೆ ಹೊರಾಂಗಣದಲ್ಲಿ ಡೋನ್ ಕ್ಯಾಮೆರಾವನ್ನು ಬಳಸಲು ಮೈಸೂರು ಅರಮನೆ ಮಂಡಳಿಯಿಂದ ಪೂರ್ವಾನುಮತಿ ಪಡೆಯುವುದು ಅವಶ್ಯಕವಾಗಿದೆ. ಡ್ರೋನ್ ಕ್ಯಾಮೆರಾ ಬಳಸಲು ಅನುಮತಿ ಪಡೆಯದೆ ಡ್ರೋನ್ ಹಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES