Thursday, December 19, 2024

ತವರು ಮನೆಗೆ ಹೋಗ್ಬೇಡ ಎಂದಿದ್ದಕ್ಕೆ ಸೊಸೆ ಆತ್ಮಹತ್ಯೆ

ಉತ್ತರಪ್ರದೇಶ : ತಾಯಿ ಮನೆಗೆ ಹೋಗಬೇಡ ಎಂದಿದ್ದಕ್ಕೆ ಸೊಸೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.

ನಿಶಾ ಮೃತ ನವವಿವಾಹಿತೆ. ನಿಶಾ ತಂದೆಯ ದೂರಿನ ಮೇರೆಗೆ ಗಂಡ ಸೇರಿದಂತೆ ಕುಟುಂಬದ ಆರು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ನಿಶಾ 2022ರ ಡಿಸೆಂಬರ್ 2 ರಂದು ಅಮಿತ್ ಅವರನ್ನು ಮದುವೆಯಾಗಿದ್ದರು. ತನ್ನ ಗಂಡ ನೌಕಾಪಡೆಗೆ ಸೇರಲು ಹೋಗಿದ್ದನು. ಹೀಗಾಗಿ, ನಿಶಾ ತವರು ಮನೆಗೆ ಹೋಗುತ್ತೇನೆ ಎಂದು ಮನೆಯವರಿಗೆ ಹೇಳಿದ್ದಳು. ಆದರೆ, ಗಂಡನ ಮನೆಯವರು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದುಬಂದಿದೆ.

ತವರು ಮನೆಗೆ ಕಳಿಸದ ಅತ್ತೆ

ನಿಶಾ ಅತ್ತೆ ಈಗಲೇ ತವರು ಮನೆಗೆ ಕಳುಹಿಸಲು ಆಗಲ್ಲ.ತವರು ಮನೆಗೆ ಹೋಗಲು ಶುಭ ಸಮಯ ಬರಲಿ ಅಂತ ಹೇಳಿದ್ದರು. ಇದರಿಂದ ನಿಶಾ ಅಸಮಾಧಾನಗೊಂಡಿದ್ದಳು. ಇವರು ತವರು ಮನೆಗೆ ತೆರಳಲು ಬಿಡುವುದಿಲ್ಲ ಅಂತ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ತಿಳಿದ ಕೂಡಲೇ ನಿಶಾ ತಂದೆ ಧ್ರುವ ಪ್ರಸಾದ್ ವರ್ಮಾ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ, ನಿಶಾ ಗಂಡ, ಮಾವ, ಅತ್ತೆ ಸೇರಿದಂತೆ ಆರು ಮಂದಿಯ ಮೇಲೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಿಶಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

RELATED ARTICLES

Related Articles

TRENDING ARTICLES