Monday, February 24, 2025

ರಭಸವಾಗಿ ಬಂದು ಡಿಕ್ಕಿ ಹೊಡೆದ ಕಾರು ; ಇಬ್ಬರು ಪಾದಚಾರಿಗಳ ಸಾವು

ಹಾವೇರಿ : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿರುವ ದುರ್ಘಟನೆ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿ ನಡೆದಿದೆ.

ಪಾದಚಾರಿಗಳು ರಸ್ತೆಯನ್ನು ದಾಟುವ ವೇಳೆಯಲ್ಲಿ ಕಾರು ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೂರಕ್ಕೆ ಹಾರಿಬಿದ್ದ ಪಾದಚಾರಿಗಳು ಗಂಭೀರ ಗಾಯಾಗೊಂಡು ಮೃತಪಟ್ಟಿದ್ದಾರೆ. ಶಿಗ್ಗಾಂವಿ ತಾಲೂಕಿನ ನೀರಕಗಿ ಗ್ರಾಮದ ಚಿದಾನಂದ ಶೆರೆವಾಡ ಮತ್ತು ವಿರೋಪಾಕ್ಷಪ್ಪ ಕಲೆ ಮೃತ ದುರ್ದೈವಿಗಳು.

ಇದನ್ನು ಓದಿ : ಜಮೀನು ವಿಚಾರಕ್ಕೆ ಗಲಾಟೆ ; ಅವಮಾನ ಸಹಿಸದೇ ಆತ್ಮಹತ್ಯೆ ಮಾಡಿಕೊಂಡ ರೈತ

ಪಾದಚಾರಿಗಳ ಮೇಲೆ ಕಾರು ಹರಿಸಿ ಪರಾರಿಯಾಗಿದ್ದ ಕಾರ್ ಚಾಲಕ.

ಬಳಿಕ ಅಪಘಾತ ಸಂಭವಿಸಿದ ಕಾರು ಬೆಳಗಾವಿ ಮೂಲದ್ದು ಎಂದು ಗೊತ್ತಾಗಿದ್ದು, ಚಾಲಕನನ್ನ ಅರ್ಧ ಗಂಟೆಯಲ್ಲಿ ಬಂಧಿಸಿದ ಶಿಗ್ಗಾಂವಿ ಪೋಲಿಸ್ ಪಡೆ.

RELATED ARTICLES

Related Articles

TRENDING ARTICLES