Sunday, December 22, 2024

ಬಳ್ಳಾರಿಯಲ್ಲಿ KKRTC ಅಧಿಕಾರಿ ಭೀಕರ ಹತ್ಯೆ

ಬಳ್ಳಾರಿ : ನಗರದ ಕೇಂದ್ರ ಜೈಲಿನ ಹತ್ತಿರ KKRTC ಅಧಿಕಾರಿಯನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.

KKRTC ಬಳ್ಳಾರಿ ವಿಭಾಗದ, ವಿಭಾಗೀಯ ಭದ್ರತಾ ಇನ್ಸ್‌ಪೆಕ್ಟರ್ ಹುಸೇನಪ್ಪ ಕೊಲೆಯಾದ ವ್ಯಕ್ತಿ. ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ. ಬಳ್ಳಾರಿಯ ಅವರ ನಿವಾಸದ ಮುಂದೇಯೇ ಹತ್ಯೆ ಮಾಡಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್, ಎಸ್ಪಿ ನಟರಾಜನ್, KKRTC ಡಿಸಿ ದೇವರಾಜ್, ಡಿಟಿಓ ಚಾಮರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರ ಸಾವನಪ್ಪಿರುವ ಘಟನೆ ಬಾಗಲಕೋಟೆಯ ಮುಧೋಳ ತಾಲೂಕಿನ ಜೆಕೆ ಸಿಮೆಂಟ್ ಕಾರ್ಖಾನೆ ಬಳಿ ನಡೆದಿದೆ. ಚಿತ್ರಬಾನುಕೋಟಿ ಗ್ರಾಮದ ಅಶೋಕ ಯಡಹಳ್ಳಿ ಎಂಬಾತ ಮೃತದುರ್ದೈವಿ.

ಬೈಕ್​ನಲ್ಲಿದ್ದ ಇಬ್ಬರ ಪೈಕಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.. ಜೆಕೆ ಕಾರ್ಖಾನೆ ಹತ್ತಿರ ಊಟ ತೆಗೆದುಕೊಂಡು ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES