Wednesday, January 22, 2025

ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ? : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು : ನೆರೆಮನೆ ಮಹಿಳೆಯ ಸ್ನಾನದ ವಿಡಿಯೋ ಮಾಡಿ ಸಿಕ್ಕಿಬಿದ್ದ ಯುವಕ ಸುಮಂತ್ ಪೂಜಾರಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಿಜೆಪಿ ರಕ್ಷಣಾ ಪಡೆಯವನೊಬ್ಬ ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದಾನೆ’ ಎಂದು ಆರೋಪಿಸಿದೆ.

ಈತ ವಿಡಿಯೋ ಮಾಡಿ ಬಿಜೆಪಿ ಕಚೇರಿಗೆ ಕಳಿಸುತ್ತಿದ್ದಾನಾ? ಅಥವಾ ಸಿಟಿ ರವಿ, ಸಂಸದ ಪ್ರತಾಪ್‌ ಸಿಂಹಗೆ ಕಳಿಸುತ್ತಿದ್ದನಾ? ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ? ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರೈವೇಟ್ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ?

ಸಂಘಪಾರಿವಾರದಿಂದ ವಿಡಿಯೋ ಚಿತ್ರೀಕರಣದ ತರಬೇತಿ ಪಡೆದವನೊಬ್ಬ ಬಾತ್ ರೂಮಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಸಿಕ್ಕಿ ಬಿದ್ದಿರುವ ಸುದ್ದಿ ಇನ್ನೂ ಬಿಜೆಪಿ ಕಚೇರಿಯನ್ನು ತಲುಪಿಲ್ಲವೇ? ಬಿಜೆಪಿ ಹೋರಾಟ, ಪ್ರತಿಭಟನೆಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೆ? ಈತನಿಂದ ಸಂತ್ರಸ್ತಳಾದ ಹಿಂದೂ ಹೆಣ್ಣುಮಗಳಿಗೆ ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ? ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡುವುದಿಲ್ಲವೇ? ಎಂದು ಕುಟುಕಿದೆ.

RELATED ARTICLES

Related Articles

TRENDING ARTICLES