Wednesday, January 22, 2025

Tomato Prices : ಇಳಿಮುಖ ಕಂಡ ಟೊಮೆಟೊ ಬೆಲೆ

ಬೆಂಗಳೂರು : ಸತತವಾಗಿ ಏರುತ್ತಿದ್ದ ಟೊಮೆಟೊ ಬೆಲೆ ಇದೀಗ ಇಳಿಮುಖವಾಗಲು ಆರಂಭಿಸಿದೆ. ಇದರಿಂದ ಗ್ರಾಹಕರು ಸ್ವಲ್ಪ ನಿರಾಳರಾಗಿದ್ದಾರೆ.

ಕೋಲಾರ ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯಲ್ಲಿ ಕುಸಿತಗೊಂಡಿದ್ದು, 15 ಕೆಜಿ ಬಾಕ್ಸ್​ ಟೊಮೆಟೊ ದರ 2,700 ರೂ.ನಿಂದ 1,500 ರೂಪಾಯಿಗೆ ಕುಸಿದಿದೆ. ಒಟ್ಟಾರೆಯಾಗಿ ಕಳೆದ ನಾಲ್ಕು ದಿನಗಳಲ್ಲಿ ಕೆಂಪು ಸುಂದರಿಯ ಬೆಲೆಯಲ್ಲಿ 1000 ರೂಪಾಯಿ ಕುಸಿತ ಕಂಡಿದೆ.

ಕಳೆದ ಎರಡು ಮೂರು ತಿಂಗಳಿನಿಂದ ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ನಿರಂತರ ಬೆಲೆ ಏರಿಕೆಯಿಂದಾಗಿ ಟೊಮೆಟೊಗೆ ಚಿನ್ನದ ಬೆಲೆ ಬಂದಿತ್ತು. ಹಲವೆಡೆ ಟೊಮ್ಯಾಟೊ ಬೆಲೆ ಲೂಟಿ ಮಾಡಲಾಗಿದ್ದರೆ, ಇನ್ನೂ ಹಲವೆಡೆ ಕಳ್ಳತನ ಪ್ರಕರಣಗಳು ನಡೆದಿದ್ದವು.

ನಾಲ್ಕು ದಿನಗಳಿಂದ ಇಳಿಕೆ

ಕಳ್ಳರಿಂದ ಟೊಮೆಟೊ ರಕ್ಷಣೆ ಮಾಡಲು ರೈತರು ರಾತ್ರಿ ಹೊತ್ತಲ್ಲೂ ಜಮೀನಿನಲ್ಲಿ ನಿಲ್ಲುತ್ತಿದ್ದರು. ತರಕಾರಿ ಮಾರುಕಟ್ಟೆಗಳಲ್ಲಿ ಸಿಸಿಟಿವಿ(CCTV) ಅಳವಡಿಸಿದ್ದರು. ಕೆಲವು ಅಂಗಡಿಗಳಲ್ಲಿ ಬೌನ್ಸರ್​ಗಳನ್ನು ನಿಯೋಜಿಸಲಾಗಿತ್ತು. ಇಷ್ಟೊಂದು ದುಬಾರಿಯಾಗಿದ್ದ ಕೆಂಪು ಸುಂದರಿ ಟೊಮೆಟೊ ಬೆಲೆ ಕಳೆದ ನಾಲ್ಕು ದಿನಗಳಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಇಂದು ಹದಿನೈದು ಕೆಜಿ ಬಾಕ್ಸ್ ಟೊಮೆಟೊ 1500 ರಿಂದ 1700 ರೂಪಾಯಿಗೆ ಹರಾಜು ಆಗಿದೆ.

RELATED ARTICLES

Related Articles

TRENDING ARTICLES