Thursday, January 23, 2025

ಎಣ್ಣೆ ಏಟಲ್ಲಿ ಕಿರಿಕ್ ಮಾಡಿದ ಯುವತಿ ; ಹೈರಾಣದ ಪೋಲಿಸರು

ಬೆಂಗಳೂರು : ಎಣ್ಣೆ ಏಟಲ್ಲಿ ಯುವತಿಯೊಬ್ಬಳು ಕಂಡ ಕಂಡವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದ ಘಟನೆ ನಗರದ ಚರ್ಚ್​ ಸ್ಟ್ರೀಟ್​ನಲ್ಲಿ ನಡೆದಿದೆ.

ತಡರಾತ್ರಿ ಮೈ ಮೇಲೆ ಪ್ರಜ್ಞೆ ಇಲ್ಲದಂತೆ ಕುಡಿದು ಯುವತಿ ನ್ಯೂಸೆನ್ಸ್ ಮಾಡಿದ್ದಾಳೆ.ಮದ್ಯದ ಮತ್ತಲ್ಲಿ ತೆಲಾಡುತ್ತಿದ್ದ ಯುವತಿಯನ್ನ ಹತೋಟಿಗೆ ತರಲು ಪೊಲೀಸರು ಹೈರಾಣಾಗಿದ್ದಾರೆ. ಮನೆಗೆ ಹೋಗಮ್ಮ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಯುವತಿ ಮುಗಿಬಿದ್ದಿದ್ದಾಳೆ.

ಇದನ್ನು ಓದಿ : ಫುಟ್​ಬಾಲ್​ ಆಟಗಾರನನ್ನು ಕಚ್ಚಿ ಎಳೆದೊಯ್ದ ಮೊಸಳೆ: ವೀಡಿಯೋ ವೈರಲ್​!

ಯುವತಿಯನ್ನು ಹೇಗಾದರೂ ಮಾಡಿ ಮನೆಗೆ ಕಳುಹಿಸುವ ಉದ್ದೇಶದಿಂದ, ಆಟೋದಲ್ಲಿ ಯುವತಿಯ ಜೊತೆಗೆ ಮಹಿಳಾ ಸಿಬ್ಬಂದಿಯನ್ನು ಕೂರಿಸಿ ಕಳಿಸೋದಕ್ಕೆ ಪೊಲೀಸರು ಮುಂದಾಗಿದ್ದಾರೆ. ಪೋಲಿಸರ ಮನವಿಗೂ ಕೇರ್ ಮಾಡದೇ ರಸ್ತೆಯಲ್ಲಿ ರಂಪಾಟ ಮಾಡಿದ್ದಾಳೆ.

ಯುವತಿಯರ ಸಹಾಯದಿಂದ ಮನೆಗೆ ಕಳಿಸಲು ಪ್ರಯತ್ನಿಸಿದಾಗ ಸಹಾಯಕ್ಕೆ ಬರುತ್ತಿದ್ದ ಯುವತಿರ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಪೋಲಿಸರು ಒಂದು ಗಂಟೆ ಸತತ ಪ್ರಯತ್ನಪಟ್ಟು ಕೊನೆಗೂ ಆಟೋದಲ್ಲಿ ಯುವತಿಯನ್ನು ಕಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Related Articles

TRENDING ARTICLES