Sunday, January 19, 2025

ರೈತನ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ ಪುಡಿರೌಡಿ ಮಹಿಳೆಯರು

ಆನೇಕಲ್ : ರೈತನೊರ್ವನ ಜಮೀನಿನಲ್ಲಿ ಏಕಾಏಕಿ ನುಗ್ಗಿ ಬೆಳೆ ಹಾಳು ಮಾಡಿರುವ ಮಹಿಳಾ ಪುಡಿರೌಡಿಗಳು ಘಟನೆ ಹುಸ್ಕೂರು ಸಮೀಪದ ಅವಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ವೆನಂ 28 ರ ಒಂದು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿ ಜೀವನ‌ ಸಾಗಿಸುತ್ತಿದ್ದ ರೈತ ಮುನಿಕಾವೇರಪ್ಪ ಮತ್ತು ಮಕ್ಕಳು. ಗ್ರಾಮದಲ್ಲಿ ದಲಿತರ ಜಮೀನು ಇರೋದು ಅದು ಒಂದೇ ಅದು ಬಿಟ್ಟು ಸುತ್ತಲು ಬೇರೆಯವರ ಜಮೀನುಗಳೇ ಇವೆ. ಈ ಹಿನ್ನೆಲೆ ಜಮೀನಿನ ಮೇಲೆ ಖಾಸಗಿ ವ್ಯಕ್ತಿಗಳ ಕಣ್ಣು ಇದ್ದು, ಪ್ರತಿ ನಿತ್ಯ‌ ಯಾವುದಾದರು ಒಂದು ವಿಚಾರದಲ್ಲಿ ಹಿಂಸೆ ಕೊಡುತ್ತಿದ್ದ ಪುಡಿರೌಡಿಗಳು.

ಇದನ್ನು ಓದಿ : ಉಡುಪಿ ಕಾಲೇಜು ಶೌಚಾಲಯ ಪ್ರಕರಣ: ತಪ್ಪು ಒಪ್ಪಿಕೊಂಡ ವಿದ್ಯಾರ್ಥಿನಿಯರು!

ರೈತ ತನ್ನ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು, ನಿನ್ನೆ ಬೆಳಗ್ಗೆ ಏಕಾಏಕಿ ಜಮೀನಿಗೆ ನುಗ್ಗಿ ಜೆಸಿಬಿಯಿಂದ ಬೆಳೆ ನಾಶಮಾಡಿ ಗುಡಿಸಲು ಕಿತ್ತುಹಾಕಿರುವ ಪುಡಿರೌಡಿ ಮಹಿಳೆಯರು. ಈ ವೇಳೆ ಬೆಳೆ ಹಾಳು ಮಾಡುತ್ತಿದ್ದ ಜೆಸಿಬಿಗೆ ಅಡ್ಡ ಬಂದ ರೈತ ಮುನಿಕಾವೇರಪ್ಪ ಮತ್ತು ಮಗಳು.

ಬಳಿಕ ರೈತ ಮತ್ತು ಮಗಳನ್ನು ತಳ್ಳಿ ಚಾಕು ತೋರಿಸಿ ಬೆದರಿಕೆ ಹಾಕಿದ ಮಹಿಳೆಯರು. ದಲಿತರ ಜಮೀನು ಕಸಿದುಕೊಳ್ಳಲು ಈ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

RELATED ARTICLES

Related Articles

TRENDING ARTICLES