ಬೀದರ್ : ಜಿಲ್ಲೆಯ ಸರ್ಕಾರಿ ಶಾಲೆ ಗೊಡೌನ್ ಗೆ ನುಗ್ಗಿದ ಕಳ್ಳರು ಮೂಟೆಗಳನ್ನು ಹೊತ್ತೊಯ್ದಿರುವ ಘಟನೆ ಹುಲಸೂರ ತಾಲೂಕಿನ ಬೇಲೂರಿನಲ್ಲಿ ನಡೆದಿದೆ.
ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಇಲ್ಲಿನ ಸರ್ಕಾರಿ ಶಾಲೆಗೆ ನುಗ್ಗಿದ ಕಳ್ಳರು ಗೊಡೌನ್ನಲ್ಲಿದ್ದ ಎರಡು ಚೀಲ ಕದ್ದು ಪರಾರಿಯಾಗಿದ್ದು, ಕಳ್ಳರ ಕೈಚಳಕದ ದೃಶ್ಯಗಳು ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನು ಓದಿ : ಹೊಸಕೋಟೆ ಬಳಿ ಡೆಡ್ಲಿ ಆ್ಯಕ್ಸಿಡೆಂಡ್ !
ಇತ್ತೀಚೆಗೆ ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ ಹಿನ್ನೆಲೆ ಜಿಲ್ಲಾ ಪೊಲೀಸ್ ಎಸ್ಪಿ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಭೇಟಿ ನೀಡಿದ್ದರು, ಎಸ್ಪಿ ಭೇಟಿ ನೀಡಿದ ಮರುದಿನವೇ ಕಳ್ಳರು ಸರ್ಕಾರಿ ಶಾಲೆಗೆ ನುಗ್ಗಿ ತಮ್ಮ ಕೈಚಳಕವನ್ನು ತೋರಿದ್ದಾರೆ.
ಕಾರ್ನಲ್ಲಿ ಬಂದ ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.