Wednesday, January 22, 2025

ಅಫ್ಘಾನಿಸ್ತಾನ ಮತ್ತು ಜಮ್ಮು ಕಾಶ್ಮೀರದ ಸುತ್ತ ಭೂಕಂಪನ!

ದೆಹಲಿ: ಶನಿವಾರ ರಾತ್ರಿ  9:30 ರ ಹೊತ್ತಿಗೆ 5.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು ದೆಹಲಿ ಎನ್ ಸಿಆರ್ ಮತ್ತು ಹತ್ತಿರದ ಪ್ರದೇಶಗಳು ಜಮ್ಮು ಮತ್ತು ಕಾಶ್ಮೀರ ಮತ್ತು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಭೂಮಿ ಕಂಪಿಸಿದೆ. ಇದೇ ವೇಳೆ ಅಫ್ಘಾನಿಸ್ತಾನದ ಹಿಂದೂಕುತ್ ಪ್ರದೇಶದಲ್ಲು ಭೂಮಿ ಕಂಪಿಸಿರುವುದು ವರದಿಯಾಗಿದೆ.

ಇದನ್ನು ಓದಿ: ಪೊಲೀಸ್​ ಮಹಾನಿರ್ದೇಶಕರಾಗಿ ಅಲೋಕ್​ ಮೋಹನ್ ಮುಂದುವರಿಸಿ ಸರ್ಕಾರ ಆದೇಶ​!

ಅಫ್ಘಾನಿಸ್ತಾನದ ಪರ್ವತ ಪ್ರದೇಶಗಳಲ್ಲಿ ಕಂಪನವು ಸಂಭವಿಸಿದ್ದು, ರಾತ್ರಿ 9:30 ರ ಸುಮಾರಿಗೆ ಎರಡು ಬಾರಿ ಭೂಕಂಪದ ಅನುಭವವಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿಕೊಂಡಿದ್ದಾರೆ.

ಭೂಕಂಪದ ಕೇಂದ್ರಬಿಂದುವು ಆಕ್ಷಾಂಶದಲ್ಲಿ 313H I ಉತ್ತರದಲ್ಲಿ ಮತ್ತು ಅಫ್ಘಾನಿಸ್ತಾನದ ಹಿಂದೂಕು‌ ಪ್ರದೇಶದಲ್ಲಿ ರೇಖಾಂಶದಲ್ಲಿ 7.77 ಡಿಗ್ರಿ ಪೂರ್ವದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

RELATED ARTICLES

Related Articles

TRENDING ARTICLES