Monday, December 23, 2024

ಹೊಸಕೋಟೆ ಬಳಿ ಡೆಡ್ಲಿ ಆ್ಯಕ್ಸಿಡೆಂಡ್ !

ಬೆಂಗಳೂರು ಗ್ರಾಮಾಂತರ : ರಾಂಗ್​ ರೂಟ್​ನಲ್ಲಿ ಬಂದ ಕಾರೊಂದು ಬೈಕ್​ ಗೆ ಡಿಕ್ಕಿ ಹೊಡೆದ ಎದೆ ಝಲ್ ಎನ್ನುವ ಅಪಘಾತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದೂ ಸೂಲಿಬೆಲೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಉಡುಪಿ ಕಾಲೇಜು ಶೌಚಾಲಯ ಪ್ರಕರಣ: ತಪ್ಪು ಒಪ್ಪಿಕೊಂಡ ವಿದ್ಯಾರ್ಥಿನಿಯರು!

ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದ ಬಳಿ ಈ ದುರ್ಘಟನೆ ನಡೆದಿದ್ದು ಅದೃಷ್ಟವಷಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ರಾಂಗ್​ ರೂಟ್​ ನಲ್ಲಿ ಬಂದ ಕಾರು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ರಭಸವಾಗಿ ಗುದ್ದಿದೆ, ಗುದ್ದಿದ ಏಟಿಗೆ ಎರಡೂ ಬೈಕ್​ ಗಳು ಜಖಂ ಗೊಂಡಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎದೆ ಝಲ್ ಎನ್ನುವ ಅಪಘಾತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ, ಸದ್ಯ ಈ ಅಪಘಾತ ಪ್ರಕರಣವು ಸೂಲಿಬೆಲೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES