Wednesday, January 22, 2025

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಇಲಿಯಾನ: ನಟ ನಟಿಯರಿಂದ ಶುಭಾಷಯಗಳ ಮಹಾಪೂರ!

ಬಹುಭಾಷಾ ನಟಿ ಇಲಿಯಾನ ಡಿ ಕ್ರೂಜ್ ಗಂಡು ಮಗುವಿಗೆ ಜನ್ಮನೀಡಿದ್ದು ಈ ಕುರಿತು ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅನುಯಾಯಿಗಳು ಮತ್ತು ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

ಇದನ್ನೂ ಒದಿ: ಫುಟ್​ಬಾಲ್​ ಆಟಗಾರನನ್ನು ಕಚ್ಚಿ ಎಳೆದೊಯ್ದ ಮೊಸಳೆ: ವೀಡಿಯೋ ವೈರಲ್​!

ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿರುವ ಇಲಿಯಾನ, ತಮ್ಮ ಮಗುವಿನ ಮುದ್ದಾದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಿದ್ದಾರೆ,ಅದರಲ್ಲಿ ತಮ್ಮ ಮಗನಿಗೆ ಕೋವಾ ಫಿಯೋನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ,ಈ ಪೋಸ್ಟ್​ನಲ್ಲಿ ಮಗು ​ಮುದ್ದಾಗಿ ಮಲಗಿರುವುದನ್ನು ಕಾಣಬಹುದು.

ನಮ್ಮ ಪ್ರೀತಿಯ ಹುಡುಗನನ್ನು ಈ ಜಗತ್ತಿಗೆ ಸ್ವಾಗತಿಸಲು ನಾವು ಎಷ್ಟು ಸಂತೋಷವಾಗಿದ್ದೇವೆ ಎಂಬುದನ್ನು ವಿವರಿಸಲು ಪದಗಳಿಲ್ಲ.ಹೃದಯವನ್ನು ತುಂಬಿ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಬಾಲಿವುಡ್ ನಟ-ನಟಿಯರು, ಹಿತೈಷಿಗಳು ನಟಿಗೆ ಶುಭಕೋರಿದ್ದಾರೆ.

 

View this post on Instagram

 

A post shared by Ileana D’Cruz (@ileana_official)

RELATED ARTICLES

Related Articles

TRENDING ARTICLES