Wednesday, January 22, 2025

ಪುಟ್ಟ ಅಭಿಮಾನಿ ಬಾಳಿಗೆ ಬೆಳಕಾದ ಸಲ್ಮಾನ್ ಖಾನ್

ಬೆಂಗಳೂರು : ಸೆರೆಬ್ರೆಲ್​ ಪಾಲ್ಸಿ ಎಂಬ ಖಾಯಿಲೆಯಿಂದ ತೀವ್ರ ಬಳಲುತ್ತಿದ್ದ ತಮ್ಮ ಪುಟ್ಟ ಅಭಿಮಾನಿ ಪಾಲಿಗೆ ನಟ ಸಲ್ಮಾನ್ ಖಾನ್ ಬೆಳಕಾಗಿದ್ದಾರೆ.

ಅಮೀನಾ ಎಂಬ ಪುಟ್ಟ ಹುಡುಗಿ ಬಾಲಿವುಡ್ ನಟ​ ಸಲ್ಮಾನ್​ ಖಾನ್ ಅವರ ಅಪ್ಪಟ ಅಭಿಮಾನಿ. ಈಕೆಯು, ಸೆರೆಬ್ರೆಲ್​ ಪಾಲ್ಸಿ ಎಂಬ ಖಾಯಿಲೆಯಿಂದ ಬಳಲುತ್ತಿದ್ದಳು. ವೈದ್ಯರಿಂದ ಬಾಲಕಿಯನ್ನು ಗುಣಪಡಿಸಲು ಅಸಾಧ್ಯ ಎಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ, ತನ್ನ ನೆಚ್ಚಿನ ನಟನನ್ನು ನೋಡಿದ ಬಳಿಕ ಅಮೀನಾ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡುಬಂದಿರುವುದು ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದೆ.

ಅಮೀನಾ ಎಂಬ ಬಾಲಕಿ ನಟ ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಸೆರೆಬ್ರೆಲ್​ ಪಾಲ್ಸಿ ಎಂಬ ಖಾಯಿಲೆಗೆ ತುತ್ತಾಗಿದ್ದರು. ಕುಟುಂಬದವರು ಅಮೀನಾಳನ್ನು ಗುಣಪಡಿಸಲು ಹೆಚ್ಚಿನ ಚಿಕಿತ್ಸೆಗೆ ದೆಹಲಿ, ಮುಂಬೈನ ಹೆಸರಾಂತ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದ್ರೆ, ಎಲ್ಲಿಯೂ ಕೂಡ ಅಮೀನಾ ಖಾಯಿಲೆ ಗುಣವಾಗಿರಲಿಲ್ಲ.

ಸಲ್ಲು ಹುಟ್ಟುಹಬ್ಬ ಆಚರಣೆ

ಸಲ್ಮಾನ್​ ಖಾನ್ ಅವರ ಸ್ಟೈಲ್, ಉಡುಗೆ-ತೊಡುಗೆಯನ್ನು ಅನುಸರಿಸುವ ಅಮೀನಾ, ಪ್ರತಿವರ್ಷ ತನ್ನ ನೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ BEING HUMAN​ ಸಂಸ್ಥೆಯ ಮೂಲಕ ನಟ ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಖುದ್ದಾಗಿ ಅಮೀನಾಳನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸಲ್ಮಾನ್​ ಖಾನ್​, ಕೆಲ ಸಮಯ ಬಾಲಕಿಯೊಂದಿಗೆ ಮಾತನಾಡಿ, ಅವರ ಮುಂದಿನ ಖರ್ಚು-ವೆಚ್ಚವನ್ನು ಭರಿಸುವುದಾಗಿ ಧೈರ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES